ಮದುವೆಯಾಗಿ ಫಸ್ಟ್ ನೈಟ್ ದಿನವೇ ಆಕೆ ಕೊಟ್ಟಳು ಶಾಕ್!! ತನ್ನವಳ ಬರುವಿಕೆಗಾಗಿ ಬೆಡ್ ರೂಮ್ ನಲ್ಲಿ ಬಕ ಪಕ್ಷಿಯಂತೆ ಕಾದ ಮದುಮಗನಿಗೆ ನಿರಾಸೆ ಮೂಡಿದ್ದು ಹೇಗೆ!?

ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವನ ಬಾಳಿನಲ್ಲಿ ಬಿರುಗಾಳಿಯೊಂದು ಬೀಸಿದ್ದು,ವಿವಾಹವಾಗಿ ಒಂದೆರಡು ದಿನಗಳಲ್ಲೇ ನ್ಯಾಯಕ್ಕಾಗಿ ಆತ ಠಾಣೆಯ ಮೆಟ್ಟಿಲೇರಿದ್ದಾನೆ.ಮದುವೆಯಾಗಿ,ಬಹುದಿನಗಳ ಆಸೆಯಂತೆ ಅಂದು ಆತನ ಫಸ್ಟ್ ಗೆ ಎಲ್ಲಾ ಅರೇಂಜ್ ಮಾಡಲಾಗಿತ್ತು. ತನ್ನವಳ ಬರುವಿಕೆಗಾಗಿ ಬಕ ಪಕ್ಷಿಯಂತೆ ಬೆಡ್ ರೂಮ್ ನಲ್ಲಿ ಕಾದು ಕುಳಿತಿದ್ದ ಆತನಿಗೆ ಹಾಲಿನ ಲೋಟ ಹಿಡಿದು ತಂದ ಆಕೆ ಅರಗಿಸಿಕೊಳ್ಳದಂತ ಶಾಕ್ ನೀಡಿದ್ದಾಳೆ.

 

ರಾಜಸ್ಥಾನದ ಜೈಪುರದಲ್ಲಿ ಇಂತಹದೊಂದು ಘಟನೆಯು ವರದಿಯಾಗಿದ್ದು, ಮದುವೆಯಾಗಿ ಗಂಡನ ಮನೆ ಸೇರಿ ಫಸ್ಟ್ ನೈಟ್ ದಿನವೇ ಆಕೆ ಕಟ್ಟಿಕೊಂಡವನನ್ನು ತ್ಯಜಿಸಿದ್ದಾಳೆ. ನನಗೆ ನಿನ್ನ ಕಂಡರೆ ಇಷ್ಟವಿಲ್ಲ, ನನಗೆ ಬೇರೆ ಹುಡುಗನೊಂದಿಗೆ ಲವ್ ಇದ್ದು ಆತನನ್ನೇ ಮದುವೆಯಾಗಬೇಕೆಂದಿದ್ದೆ, ಆದರೆ ಮನೆಯವರ ಒತ್ತಾಯಕ್ಕೆ ಮಣಿದು ನಿನ್ನ ಕೈಯ್ಯಲ್ಲಿ ತಾಳಿ ಕಟ್ಟಿಸಿಕೊಂಡೆ ಎಂದೆಲ್ಲ ಮಾತು ಶುರು ಮಾಡಿದ್ದಾಳೆ.

ಇದರಿಂದ ಬೇಸತ್ತ ಆ ಯುವಕ ಅದೆಷ್ಟೇ ಮನವೊಲಿಸಿದರೂ ಆಕೆ ಕೇರ್ ಅನ್ನದೆ ಆತನಿಂದ ತನ್ನ ದೇಹವನ್ನು ಮುಟ್ಟಿಸಿಕೊಳ್ಳಲು ಬಿಡದೆ ಸತಾಯಿಸಿದ್ದಾಳೆ. ಬಳಿಕ ಒಂದೆರಡು ದಿನಗಳ ಕಾಲ ಆಕೆಯನ್ನು ಮನವೊಲಿಸುವ ಪ್ರಯತ್ನ ನಡೆಯಿತಾದರೂ ಆಕೆಯು ತನ್ನ ನಿರ್ಧಾರ ಬದಲಿಸದೇ ಪ್ರೀತಿಸಿದವನೊಂದಿಗೆ ಬಾಳಲು ಪಟ್ಟು ಹಿಡಿದಿದ್ದಾಳೆ. ಇತ್ತ ಆಕೆಯ ಪ್ರಿಯಕರನಿಂದ ಮದುಮಗನಿಗೆ ಬೆದರಿಕೆ ಬರಲು ಪ್ರಾರಂಭವಾಗಿದ್ದು ವಿಷಯ ಮನೆತುಂಬಾ ಸುದ್ದಿಯಾಗಿದೆ.

ವಿಚಾರ ಯುವಕನ ಮನೆಯವರ ಗಮನಕ್ಕೆ ಬರುತ್ತಿದ್ದಂತೆ ಎರಡೂ ಮನೆಯವರ ಮಧ್ಯೆ ಮಾತು ಬೆಳೆದಿದ್ದು, ಸದ್ಯ ಪ್ರಕರಣವು ಠಾಣೆಯ ಮೆಟ್ಟಿಲೇರಿದೆ.

Leave A Reply

Your email address will not be published.