ಅನ್ಯಧರ್ಮದ ಮ್ಯಾನೇಜರ್ ಜೊತೆ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭ ಕಂಪನಿಯೊಂದರ ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ!! ದಾರಿ ಮಧ್ಯೆಯೇ ಬಸ್ಸಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು

ಒಂದೇ ಕಂಪನಿಯ ಮ್ಯಾನೇಜರ್ ಹಾಗೂ ಮಹಿಳಾ ಸುಪರ್ವೈಸರ್ ಬಸ್ಸಿನಲ್ಲಿ ಜೊತೆಯಾಗಿ ತೆರಳುತ್ತಿದ್ದ ಸಂದರ್ಭ ತಂಡವೊಂದು ಬಸ್ಸು ತಡೆದು ಜೀವ ಬೆದರಿಕೆ ಒಡ್ಡಿ, ಬಸ್ಸಿನಿಂದ ಕೆಳಗಿಳಿಸಿದ ಘಟನೆಯೊಂದು ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರಿಲಯನ್ಸ್ ಕಂಪನಿಯ ಕಾಸರಗೋಡು ಮೂಲದ ಮಹಿಳಾ ಸಿಬ್ಬಂದಿಯೊಬ್ಬರು ತನ್ನ ಕಂಪನಿ ಮ್ಯಾನೇಜರ್ ಜೊತೆ ಪುತ್ತೂರಿನ ಸಂಸ್ಥೆಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಬಸ್ಸು ಬಂಟ್ವಾಳ ಸಮೀಪದ ಕುದ್ರಬೆಟ್ಟು ಎಂಬಲ್ಲಿ ತಲುಪಿದಾಗ ತಂಡವೊಂದು ಇವರನ್ನು ಪ್ರಶ್ನಿಸಿದ್ದು, ಮ್ಯಾನೇಜರ್ ಅನ್ಯಮತೀಯ ಎಂದು ಹೇಳಿ ಜೊತೆಯಾಗಿ ತೆರಳದಂತೆ ತಡೆಹಿಡಿದಿದ್ದಾರೆ ಎನ್ನಲಾಗಿದೆ.

ಜೀವ ಬೆದರಿಕೆ ಒಡ್ಡಿದಲ್ಲದೆ,ಬಸ್ಸಿನಲ್ಲಿ ಮುಂದಕ್ಕೆ ಹೋಗದಂತೆ ದಾರಿ ಮಧ್ಯೆಯೇ ಕೆಳಗಿಳಿಸಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.