ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿತ!! ನಾಲ್ವರು ಕಾರ್ಮಿಕರು ಮೃತ್ಯು-ಉಳಿದವರಿಗಾಗಿ ಶೋಧ

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಅವಶೇಷಗಳಡಿ ಸಿಲುಕಿ ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ ಘಟನೆಯು ಕೇರಳದ ಕೊಚ್ಚಿಯ ಇಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

 

ವಲಸೆ ಕಾರ್ಮಿಕರ ತಂಡವೊಂದು ಇಲ್ಲಿನ ಕಟ್ಟಡವೊಂದರ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು, ಘಟನೆಯಿಂದಾಗಿ ಐವರು ಮಣ್ಣಿನಡಿ ಸಿಲುಕಿದ್ದರು.

ಬಳಿಕ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಸ್ಥಳೀಯರು ನಾಲ್ವರ ಮೃತದೇಹವನ್ನು ಹೊರತೆಗೆದಿದ್ದು,ಉಳಿದವರ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

Leave A Reply

Your email address will not be published.