ರಾಮ್ ಸೇನಾ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ!! ಆರೋಪಿಗಳ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ-ಹೆಚ್ಚಿದ ಕಾರ್ಯಕರ್ತರ ಆಕ್ರೋಶ

ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ರಾಮ್ ಸೇನಾ ಮುಖಂಡರೊಬ್ಬರ ಮೇಲೆ ಹಿಂದೂ ಯುವಕರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು,ಗಾಯಾಳು ಉಡುಪಿಯ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಾದ ಘಟನೆಯು ಸಿಗಂದೂರಿನ ತುಮರಿ ಎಂಬಲ್ಲಿ ನಡೆದಿದೆ.

 

ಹಲ್ಲೆಗೊಳಗಾದ ಮುಖಂಡನನ್ನು ಸಾಗರ ತಾಲೂಕಿನ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ರಾಘವೇಂದ್ರ, ಹರೀಶ, ಸುಬ್ರಮಣ್ಯ ಎನ್ನಲಾಗಿದೆ.ಸದ್ಯ ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ, ಘಟನೆಯನ್ನು ರಾಜ್ಯಾ ಘಟಕದ ಗಮನಕ್ಕೆ ತರಲಾಗಿದ್ದು, ತೀವ್ರವಾಗಿ ಖಂಡಿಸಲಾಗಿದೆ. ಯಾವುದೇ ಕಾರಣಕ್ಕೂ ಅಪರಾಧೀಗಳಿಗೆ ರಕ್ಷಣೆ ನೀಡಬಾರದು, ಪೊಲೀಸರು ಕ್ರಮ ಕೈಗೊಳ್ಳದೆ ಸತಾಯಿಸಿರುವ ಬಗ್ಗೆ ಗಮನಕ್ಕೆ ಬಂದಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.