15 ವರ್ಷಕ್ಕಿಂತ ಹಳೆ ವಾಹನಗಳ ನೋಂದಣಿ ನವೀಕರಣ ಎಂಟು ಪಟ್ಟು ದುಬಾರಿ : ಎಪ್ರಿಲ್ ನಿಂದ ಜಾರಿ
ಈ ವರ್ಷದ ಏಪ್ರಿಲ್ ಬಳಿಕ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮರುನೋಂದಣಿಗೆ ಶುಲ್ಕ ಎಂಟುಪಟ್ಟು ಅಧಿಕವಾಗಲಿದೆ. ರಸ್ತೆ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಏಪ್ರಿಲ್‌ನಿಂದ ಜಾರಿಗೆ ಬರುತ್ತಿದೆ.
ಭಾರತದಲ್ಲಿ ಕನಿಷ್ಠ 12 ಮಿಲಿಯನ್ ವಾಹನಗಳು ಸ್ಕ್ಯ್ರಾಪಿಂಗ್‌ಗೆ ಸಿದ್ಧವಾಗಿವೆ ಎಂದು ಅಧಿಕೃತ ಡೇಟಾ ವಾಹನ ಸ್ಕ್ಯ್ರಾಪಿಂಗ್ ಮಾಹಿತಿ ನೀಡುತ್ತದೆ. ವಾಹನ ಅರ್ಜಿಗಳನ್ನು ಡಿಜಿಟಲ್ ಆಗಿ ಸಲ್ಲಿಸಬೇಕು. ಡಿಜಿಟಲ್ ಆಗಿ ಪರಿಶೀಲಿಸುತ್ತದೆ.
ಅಧಿಸೂಚನೆಯ ನಂತರ, ಏಪ್ರಿಲ್ 1 ರಿಂದ 15 ವರ್ಷ ಹಳೆಯ ವಾಹನಗಳ ನೋಂದಣಿ ನವೀಕರಣಕ್ಕೆ 5,000 ರೂ. ತೆರಬೇಕಾಗುತ್ತದೆ. ಪ್ರಸ್ತುತ ದರ 600 ರೂ. ಇದೆ, ದ್ವಿಚಕ್ರ ವಾಹನಗಳಿಗೆ 300 ರೂ. ಶುಲ್ಕದ ಬದಲಿಗೆ 1,000 ರೂ. ಆಗಲಿದೆ. ಆಮದು ಮಾಡಲಾದ ಕಾರುಗಳಿಗೆ ಈ ಶುಲ್ಕ ಪ್ರಸ್ತುತ ರೂ 15,000 ರಿಂದ ರೂ 40,000 ಕ್ಕೆ ಏರುತ್ತದೆ. ಈ ನವೀಕರಣದಲ್ಲಿ ವಿಳಂಬವಾದರೆ ಪ್ರತಿ ತಿಂಗಳು ರೂ. 300 ದಂಡ ತೆರಬೇಕಾಗುತ್ತದೆ. ಅದೇ ರೀತಿ ವಾಣಿಜ್ಯ ವಾಹನಗಳಿಗೆ ಪ್ರತಿ ತಿಂಗಳು ದಂಡ 500 ರೂ. ಇರಲಿದೆ.
15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಈ ಹೊಸ ನಿಯಮದ ಪ್ರಕಾರ ಐದು ವರ್ಷಗಳಿಗೊಮ್ಮೆ ನವೀಕರಣ ಮಾಡಲು ಅರ್ಜಿ ಸಲ್ಲಿಸಬೇಕಾಗುತ್ತದೆ.