ಅಮೇರಿಕಾದಲ್ಲಿ ಈ ಗುಳಿಗೆಗೆ ಭಾರಿ ಬೇಡಿಕೆ! ಆದ್ರೆ ಹೆಚ್ಚು ಬಳಸಿದರೆ ಪ್ರಾಣಕ್ಕೆ ಕುತ್ತು
ರಷ್ಯಾ ಯುಕ್ರೇನ್ ಯುದ್ಧ ಶುರುವಾಗ್ತಿದ್ದಂತೆ, ಅಮೆರಿಕನ್ನರಿಗೇ ಹೆಚ್ಚಾಗಿ ಈ ಭಯ ಕಾಡೋಕೆ ಶುರುವಾಗಿದೆ. ಅದು ಏನು ಎಂದರೆ ಪೊಟ್ಯಾಷಿಯಂ ಅಯೋಡೈಯ್ಡ್ ಮಾತ್ರಗಳ ಮಾರಾಟದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಈ ಮಾತ್ರೆ ಬಹಳ ತೆಗೆದುಕೊಂಡರೆ ಪ್ರಾಣವೇ ಹೋಗ್ಬೋದು ಅಂತ ಸೆಂಟರ್ಸ್ ಫರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಈಗಾಗಲೇ ಎಚ್ಚರಿಕೆ ನೀಡಿದೆ.
ರಷ್ಯಾ ಯುಕ್ರೇನ್ನ ಪವರ್ ಪ್ಲಾಂಟ್ ಕಂಟ್ರೋಲ್ಗೆ ತಗೆದುಕೊಂಡ ಬಳಿಕ ಹೆದರಿದ ಅಮೇತಿಕ ಜನ ಮಾತ್ರೆಗಳನ್ನು ಖರೀದಿಸುತ್ತಿದ್ದಾರೆ.ಹಾಗಾಗಿ ಈ ಮಾತ್ರೆಗೆ ದೊಡ್ಡಮಟ್ಟದ ಬೇಡಿಕೆ ಬಂದಿದ್ದು, ಇ-ಬೇ ಆನ್ಲೈನ್ ಫ್ಲಾಟ್ಫಾರ್ಮ್ನಲ್ಲಿ ಐಒಎಸ್ಎಟಿ ಅನ್ನೋ ಸಂಸ್ಥೆಯ ಮಾತ್ರೆಯ ಬೆಲೆ 14 ಡಾಲರ್ ಇದ್ದಿದ್ದು, 149 ಡಾಲರ್ಗೆ ಏರಿಕೆಯಾಗಿದೆ.
ಈ ಆಯಂಟಿ ರೇಡಿಯೇಷನ್ ಮಾತ್ರೆಗಳನ್ನು ಜಾಸ್ತಿ ತಗೊಳ್ಬೇಡಿ. ಅದು ತುಂಬಾ ಡೆಡ್ಲಿ ಆಗ್ಬೋದು, ಪ್ರಾಣವೇ ಹೋಗ್ಬೋದು ಎಂದು ಎಚ್ಚರಿಕೆ ನೀಡಲಾಗುತ್ತಿದೆ. 2011ರಲ್ಲಿ ಜಪಾನ್ನಲ್ಲಿ ಭೂಕಂಪ, ಸುನಾಮಿ ಸಂಭವಿಸಿದಾಗ ಫುಕುಶಿಮಾದಲ್ಲಿರೋ ಪರಮಾಣು ಘಟಕಕ್ಕೆ ಹಾನಿಯಾಗಿತ್ತು. ಆಗಲೂ ಇದೇ ರೀತಿ ಅಮೆರಿಕದಲ್ಲಿ ಪೊಟ್ಯಾಷಿಯಂ ಅಯೋಡಿನ್ ಮಾತ್ರೆಗಳಿಗೆ ಭಾರಿ ಪ್ರಮಾಣದ ಬೇಡಿಕೆ ಬಂದಿತ್ತು. ಆಗಲೂ ಇದೇ ರೀತಿ ಅಮೆರಿಕದಲ್ಲಿ ಪೊಟ್ಯಾಷಿಯಂ ಅಯೋಡಿನ್ ಮಾತ್ರೆಗಳಿಗೆ ಭಾರಿ ಪ್ರಮಾಣದ ಬೇಡಿಕೆ ಬಂದಿದೆ.