ಪುತ್ತೂರು: ಕಾಲೇಜಿಗೆ ರಜೆ ಇದ್ದರೂ ಅನ್ಯ ಕೋಮಿನ ಯುವಕರೊಂದಿಗೆ ಬಸ್ ಸ್ಟಾಂಡ್ ನಲ್ಲಿ ಚಕ್ಕಂದ!! ಹಿಂದೂ ಯುವತಿಯರಿಗೆ ಸಂಘಟನೆಯ ಕಾರ್ಯಕರ್ತರಿಂದ ಪೋಷಕರ ಸಮ್ಮುಖದಲ್ಲಿ ಎಚ್ಚರಿಕೆ

ಪುತ್ತೂರು: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದರೂ,ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ವಿಷಯ ಗಮನಕ್ಕೆ ಬಂದ ಕೂಡಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

 

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ಇಬ್ಬರು ಅನ್ಯ ಕೋಮಿನ ಯುವಕರೊಂದಿಗೆ ಹಿಂದೂ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ವಿಷಯ ತಿಳಿದು ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದರು. ಬಳಿಕ ಜೋಡಿಗಳನ್ನು ಸಂಘಟನೆಯ ಕಚೇರಿಗೆ ಕರೆದುಕೊಂಡು ಹೋಗಿ ಪೋಷಕರ ಉಪಸ್ಥಿತಿಯಲ್ಲಿ ಬುದ್ಧಿವಾದ ಹೇಳಿದಲ್ಲದೆ, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.