ಹಿಜಾಬ್ ತೀರ್ಪಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿತನ ಪ್ರದರ್ಶನ!! ಸುಳ್ಯದ ವ್ಯಕ್ತಿಯೋರ್ವನಿಂದ ಕೇಸರಿ ಶಾಲು ಹಾಗೂ ಹಿಂದೂ ಸಂಘಟನೆಗಳ ಅವಹೇಳನ

0 12

ಹಿಜಾಬ್ ಕುರಿತಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಈಗಾಗಲೇ ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಹೈಕೋರ್ಟ್ ನೀಡಿದ ತೀರ್ಪಿನಿಂದ ಅರಗಿಸಿಕೊಳ್ಳಲಾಗದ ಕೆಲ ಮತಾಂಧ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಮುದಾಯವನ್ನು, ಧರ್ಮವನ್ನು ಟೀಕಿಸುತ್ತಿರುವುದು ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುಸ್ಲಿಂ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಹಿಜಾಬ್ ತೀರ್ಪಿನ ಕುರಿತು ಕಿಡಿಕಾರಿದ್ದು,ಆರ್.ಎಸ್.ಎಸ್ ಹಾಗೂ ಕೇಸರಿ ಶಾಲಿನ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದು ಬೆಳಕಿಗೆ ಬಂದಿದೆ.

ಸುಳ್ಯ ನಿವಾಸಿ ಎನ್ನಲಾದ ಅಬ್ದುಲ್ ಮುತಾಲಿಬ್ ಎಂಬಾತ ತನ್ನ ಫೇಸ್ಬುಕ್ ಬುಕ್ ನಲ್ಲಿ ಈ ರೀತಿಯಾಗಿ ದುರ್ವರ್ತನೆ ತೋರಿದ್ದು,ಸದ್ಯ ಈತನ ಮೆಸೇಜ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

Leave A Reply