ವಿಟ್ಲ : ತೆಂಗಿನಮರದಿಂದ ಕಾಯಿಕಿತ್ತ ವಿಚಾರಕ್ಕೆ ಜೀವಬೆದರಿಕೆಯೊಡ್ಡಿ ಹಲ್ಲೆ | ಪ್ರಕರಣ ದಾಖಲು!

Share the Article

ವಿಟ್ಲ : ತೆಂಗಿನ ಮರದಿಂದ ಕಾಯಿಕಿತ್ತ ವಿಚಾರಕ್ಕೆ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೊತೆಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪಾವಲುಮೂಲೆ ನಿವಾಸಿ ಸುಂದರ ನಾಯ್ಕ್ ಅವರ ಪುತ್ರಿ ಮಮತಾ ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿ ವಾಮನ ನಾಯ್ಕ ಪ್ರಕರಣದ ಆರೋಪಿಯಾಗಿದ್ದಾರೆ.

ತೆಂಗಿನಕಾಯಿ ತೆಗೆದ ವಿಚಾರಕ್ಕೆ ತನ್ನ ತಂದೆಗೆ ಮಾ.14 ರಂದು ನನ್ನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏನೆಂದು ಕೇಳಲು ಹೋದ ನನಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿ, ನನ್ನ ತಂದೆಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಮತಾರವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಗೊಂಡ ಮಮತಾ ಹಾಗೂ ಅವರ ತಂದೆ ತಾಯಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.

Leave A Reply