ವಿರಾಟ್ ಕೊಹ್ಲಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿ ಮೇಲೆ ಬಿತ್ತು “FIR”!|ಕಾರಣ?

ಬೆಂಗಳೂರು :ಅಭಿಮಾನಿಗಳು ತಮ್ಮ ನೆಚ್ಚಿನ ನಟರೊಂದಿಗೆ,ಕ್ರಿಕೆಟ್ ಮ್ಯಾನ್ ನೊಂದಿಗೆ ಫೋಟೋ ತೆಗೆದುಕೊಳ್ಳೋದು ಕಾಮನ್. ಇದೇ ರೀತಿ ವಿರಾಟ್ ಕೊಹ್ಲಿಯ ಜೊತೆ ಫ್ಯಾನ್ ಓರ್ವ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ ಆತನ ಮೇಲೆ ಎಫ್ ಐಆರ್ ದಾಖಲಾಗಿದೆ.ಕೇವಲ ಫೋಟೋಗಾಗಿ ಈತನ ಮೇಲೆ ಕೇಸ್ ದಾಖಲಾಗಲು ಕಾರಣ ಏನು ಗೊತ್ತೇ..

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಡೇ ನೈಟ್ ಟೆಸ್ಟ್‌ನ ಎರಡನೇ ದಿನದಂದು, ಆಟದ ಅಂತಿಮ ಕ್ಷಣಗಳಲ್ಲಿ ಮೂವರು ಆಭಿಮಾನಿಗಳು ಮೈದಾನಕ್ಕೆ ನುಗ್ಗಿ, ವಿರಾಟ್ ಕೊಹ್ಲಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.ಆದ್ರೆ, ಕೊಹ್ಲಿ ಕೂಡ ಅವರನ್ನ ತಡೆಯಲು ಸಾಧ್ಯವಾಗ್ಲಿಲ್ಲ. ಇದಾದ ಬಳಿಕ ಭದ್ರತಾ ಸಿಬ್ಬಂದಿ ಅವರನ್ನ ಹೊರದಬ್ಬಿದರು. ಶ್ರೀಲಂಕಾದ ಎರಡನೇ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಹೊಡೆತಕ್ಕೆ ಒಳಗಾಗಿ ಕುಸಲ್ ಮೆಂಡಿಸ್ ಚಿಕಿತ್ಸೆ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು.

ಇದೀಗ ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ಈ ಅಭಿಮಾನಿಗಳನ್ನ ವಶಕ್ಕೆ ಪಡೆದಿದ್ದಾರೆ. ತಮ್ಮ ನೆಚ್ಚಿನ ತಾರೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಭದ್ರತಾ ರೇಖೆಯನ್ನ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ಮಾಹಿತಿ ನೀಡಿದ್ದಾರೆ.ಕ್ರೀಡಾಂಗಣಕ್ಕೆ ನುಗ್ಗಿದ ಮೂವರು ಆಭಿಮಾನಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಓರ್ವನನ್ನ ಕಲಬುರಗಿ ಹಾಗೂ ಮತ್ತೊಬ್ಬನನ್ನು ಬೆಂಗಳೂರಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

https://twitter.com/ZLX_comfort/status/1503044266138169345?s=20&t=Zcvhc6wr7poRg6hcnfeoPw

Leave A Reply

Your email address will not be published.