ಗಂಡನ ದುಶ್ಚಟದಿಂದ ಬೇಸತ್ತ 8 ತಿಂಗಳ ಗರ್ಭಿಣಿ ಹೆಂಡತಿ ನೇಣಿಗೆ ಶರಣು | ಹೊರಜಗತ್ತಿಗೆ ಕಾಲಿಡಬೇಕಿದ್ದ ಕಂದಮ್ಮನ ಜೊತೆ ಸಾವಿನ ಹಾದಿ ಹಿಡಿದ ಅಮ್ಮ!
ಎಂಟು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೇರಳ್ ಕಲ್ಲಾರದಲ್ಲಿರುವ ಆಕೆಯ ಮನೆಯಲ್ಲಿ ನಡೆದಿದೆ.
ಮೃತ ಗರ್ಭಿಣಿಯನ್ನು ಭಾಗ್ಯ ( 21) ಎಂದು ಗುರುತಿಸಲಾಗಿದೆ. ಗಂಡನ ಮದ್ಯ ವ್ಯಸನದ ಕಾಟದಿಂದ ಖಿನ್ನತೆಗೆ ಜಾರಿದ್ದ ಭಾಗ್ಯ, ಅದರಿಂದ ಹೊರಬರಲು ಸಾಧ್ಯವಾಗದೇ ತನ್ನ ಹೊಟ್ಟೆಯಲ್ಲಿದ್ದ ಕಂದಮ್ಮನ ಜೊತೆಗೆನೇ ಸಾವಿನ ಹಾದಿ ಹಿಡಿದಿದ್ದಾಳೆ.
ಭಾನುವಾರ ಸಂಜೆ 4 ಗಂಟೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ನೇಹಿತರೊಂದಿಗೆ ಸೇರಿ ಪತಿ ಯಾವಾಗಲೂ ಮದ್ಯ ಸೇವಿಸಲು ಹೋಗುತ್ತಿದ್ದರಿಂದ ದಂಪತಿಗಳ ಮಧ್ಯೆ ಜಗಳ ಆಗುತ್ತಿತ್ತು.
ಈ ಘಟನೆ ಸಂಬಂಧ ಕಲ್ಲಾರ ಪೊಲೀಸರು ಭಾಗ್ಯಳ ಮೃತದೇಹವನ್ನು ಸರಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.