ನೀವು ಧೀರ್ಘಾಯುಷ್ಯ ಬದುಕಬೇಕೇ ? ಇಲ್ಲಿದೆ ನೋಡಿ ನಿಯಮಿತವಾಗಿ ಸುಕ್ಕಾ ಡ್ರಿಂಕ್ಸ್ ಏರಿಸುವ 102 ವರ್ಷ ವಯಸ್ಸಿನ ಮಹಿಳೆಯ ದೀರ್ಘಾಯುಷ್ಯದ ರಹಸ್ಯ

ಎಲ್ಲರಿಗೂ ಬದುಕಿಲ್ಲಿ ಹಲವಾರು ವರ್ಷ ಬದುಕಬೇಕೆಂಬ ಆಸೆ ಇರುತ್ತದೆ. ನೂರಾರು ವರ್ಷ ಸಮೃದ್ಧವಾಗಿ ಬದುಕಲು ಜನ ಹಂಬಲಿಸುತ್ತಾರೆ. ಉತ್ತಮ ಜೀವನಕ್ಕಾಗಿ ಆರೋಗ್ಯವೇ ಭಾಗ್ಯ ಎಂದು ಡಯಟ್ ಪ್ಲಾನ್ ಮಾಡಿಕೊಂಡು ಸೊಪ್ಪು, ತರಕಾರಿ, ಕಾಳುಗಳನ್ನು ತಿನ್ನುತ್ತ ತಮ್ಮ ದಿನ ನಿತ್ಯದ ದಿನಚರಿ ಕಳೆಯುತ್ತಾರೆ. ಅನೇಕ ಮಾತ್ರೆಗಳನ್ನು ನುಂಗುತ್ತಾರೆ. ಹಿಂದಿನ ಕಾಲದಲ್ಲಿ ನೂರಾರು ವರ್ಷ ಬದುಕುತ್ತಿದ್ದರು. ಈಗ ಅನೇಕ ಕಾಯಿಲೆಗಳಿಂದ, ಕಲುಷಿತ ವಾತಾವರಣ, ಒತ್ತಡದ ಜೀವನದಿಂದ ಎಲ್ಲರೂ ಅರ್ಧಾಯ್ಯುಷ್ಯಿಗಳಾಗಿದ್ದಾರೆ. ಆದರೂ ಜನರಿಗೆ ನೂರಾರು ವರ್ಷ ಉತ್ತಮ ಆರೋಗ್ಯದಿಂದ ಬದುಕಬೇಕೆಂಬ ಕನಸಿರುತ್ತದೆ.

ಇಲ್ಲೊಬ್ಬ ಮಹಿಳೆ 102 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಆಹಾರ ಪದ್ಧತಿ ಬಗ್ಗೆ ತಿಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. . ಈ ಮಹಿಳೆ ತನ್ನ ದೀರ್ಘಾಯುಷ್ಯದ ಕೆಲವು ರಹಸ್ಯಗಳನ್ನು ಈಗ ಹಂಚಿಕೊಂಡಿದ್ದಾರೆ
ಇಂಗ್ಲೆಂಡ್‌ನ ಬ್ರೋಮ್ಸ್‌ಗ್ರೋವ್‌ನಲ್ಲಿ ವಾಸಿಸುತ್ತಿರುವ ಲಿಲ್ಲಿ ಬುಲೆನ್ ಇತ್ತೀಚೆಗೆ ತನ್ನ 102 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಾರ್ಟಿಯ ಸಂಭ್ರಮದಲ್ಲಿ ಲಿಲ್ಲಿ ತಮ್ಮ ದೀರ್ಘಾಯುಷ್ಯದ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.


Ad Widget

Ad Widget

Ad Widget

ನಾಳಿನ ಭರವಸೆ ಯಾರಿಗೂ ಇರುವುದಿಲ್ಲ. ಹಾಗಾಗಿ ಜೀವನದ ಪ್ರತಿಯೊಂದು ಕ್ಷಣವನ್ನೂ ನಗುತ್ತ, ಉತ್ಸಾಹದಿಂದ ಬದುಕಬೇಕು. ನಿನ್ನೆಯ ಬಗ್ಗೆ ಚಿಂತಿಸದೆ ಇಂದು ಸಂತೋಷವಾಗಿರುವುದು ಅವಶ್ಯಕ ಎಂದಿದ್ದಾರೆ. 99 ನೇ ವಯಸ್ಸಿನಲ್ಲಿ, ಲಿಲ್ಲಿ ಐಸ್ ಸ್ಕೇಟಿಂಗ್ ಅನ್ನು ಸಹ ಪ್ರಯತ್ನಿಸಿದ್ದಾರೆ.

ಇನ್ನು ಡಯಟ್ ಪ್ಲಾನ್ ಮಾಡುವವರಿಗೆ ಆಶ್ಚರ್ಯಕರವಾಗಿ ಒಂದು ಸಂಗತಿ ಹೇಳಿದ್ದಾರೆ ಅದೆನೆಂದರೆ ಟಕಿಲಾ ಶಾಟ್ಸ್ (ಸುಕ್ಕಾ ಡ್ರಿಂಕ್), ಜಾಗರ್ಬಾಂಬ್ಸ್, ಸಾಸೇಜ್ ರೋಲ್ಸ್ ಮತ್ತು ಡೊಮಿನೋಸ್ ಪಿಜ್ಜಾ ತನ್ನ ದೀರ್ಘಾಯುಷ್ಯದ ರಹಸ್ಯಗಳಾಗಿವೆ ಎಂದು ಲಿಲ್ಲಿ ಹೇಳಿಕೊಂಡಿದ್ದಾರೆ. ತನ್ನ 100 ನೇ ಹುಟ್ಟುಹಬ್ಬದಂದು ಲಿಲ್ಲಿ, ಟಕಿಲಾ ಮತ್ತು ಜಾಗರ್ಬಾಂಬ್ ಸೇವಿಸಿದ್ದಾರೆ. ಇವತ್ತಿಗೂ ದೈಹಿಕವಾಗಿ ಮಾನಸಿಕವಾಗಿ ಬದುಕಿನ ಬಗ್ಗೆ ಪ್ರೀತಿ ಇಟ್ಟುಕೊಂಡು ಅಶಾವಾದಿಯಾಗಿ ಬದುಕುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: