ಬೆಳ್ತಂಗಡಿ: ಅರಣ್ಯ ಇಲಾಖೆಯ ವತಿಯಿಂದ ಹಾಕಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ!! ನಸುಕಿನ ವೇಳೆಯಲ್ಲಿ ರಾಜಾರೋಷವಾಗಿ ತಿರುಗಾಡುವ ವಿಡಿಯೋ ವೈರಲ್ – ಭಯದ ಭೀತಿ ನಿರ್ಮಾಣ
ಬೆಳ್ತಂಗಡಿ: ಹುಲಿ ಗಣತಿಯ ಯೋಜನೆಯ ಉದ್ದೇಶದಿಂದ ಅರಣ್ಯ ಇಲಾಖೆಯ ವತಿಯಿಂದ ಹಾಕಲಾಗಿದ್ದ ಸಿಸಿ ಕ್ಯಾಮೆರಾ ಒಂದರಲ್ಲಿ ನಸುಕಿನ ವೇಳೆ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ತಾಲೂಕಿನ ಚಾರ್ಮಾಡಿ ಗ್ರಾಂ.ಪ. ವ್ಯಾಪ್ತಿಯ ನೆಲ್ಲಿಗುಡ್ಡೆ ಪರ್ನಲೇ ಎಂಬಲ್ಲಿ ಕ್ಯಾಮೆರಾ ಇಡಲಾಗಿದ್ದು, ಹುಲಿ ಸಂಕುಲವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಅನುಷ್ಠಾನಗೊಳಿಸಿರುವ ಕಾರ್ಯದಲ್ಲಿ 5 ದಿನಗಳಿಗೊಮ್ಮೆ ಈ ಕ್ಯಾಮೆರಾವನ್ನು ಪರಿಶೀಲನೆ ನಡೆಸಲಾಗುತ್ತದೆ.
ಈ ಭಾಗದಲ್ಲಿ ನಸುಕಿನ ವೇಳೆ ಕೆಲಸಕ್ಕೆ ತೆರಳುವ ದಾರಿಹೋಕರು, ಸಾರ್ವಜನಿಕರು, ವಾಹನ ಸವಾರರು ಇದ್ದು ಭಯಾನಕ ಕಾಡುಪ್ರಾಣಿಗಳ ಕಾಟ ಇದೆಯೆಂದು ಈ ಮೊದಲೇ ಒಮ್ಮೆ ಅಧಿಕಾರಿಗಳ, ಇಲಾಖೆಯ ಗಮನಕ್ಕೆ ತರಲಾಗಿತ್ತು. ಸದ್ಯ ಇವೆಲ್ಲವಕ್ಕೂ ಪುಷ್ಠಿ ನೀಡುವಂತಹ ಉದಾಹರಣೆ ದೊರೆತಿದ್ದು ಇನ್ನಾದರೂ ನರಭಕ್ಷಕ ಕಾಡು ಪ್ರಾಣಿಗಳ ಹಾವಳಿಯಿಂದ ಜನತೆಗೆ ಮುಕ್ತಿ ಸಿಗಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹ.