ಬಂಟ್ವಾಳ : ಹಾಡುಹಗಲೇ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನ ಕಳವು ಮಾಡಿದ ಆರೋಪಿಯ ಬಂಧನ

ಬಂಟ್ವಾಳ : ಮನೆಯಿಂದ ಹಾಡುಹಗಲೇ ಲಕ್ಷಾಂತರ ರೂ.ಮೌಲ್ಯದ ಬಂಗಾರ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ‌ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಂಧನ ವಿಧಿಸಲಾಗಿದೆ.

 

ಅರಳ ಗ್ರಾಮ್ ಶುಂಠಿ ಹಿತ್ಲು ನಿವಾಸಿ ಅಶ್ರಫ್ ( 42) ಬಂಧಿತ ಆರೋಪಿ.

ಪೊಲೀಸರು ಖಚಿತ ಆಧಾರದ ಮೇಲೆ ಸೋರ್ನಡು ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಜ.31 ರಂದು ಅರಳ ಗ್ರಾಮದ ಪೋರ್ಕಳ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆದಿತ್ತು. ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ಸಂದರ್ಭದಲ್ಲಿ ಒಳಗೆ ನುಗ್ಗಿದ ಕಳ್ಳ ಗೋದ್ರೇಜಿನಲ್ಲಿದ್ದ ಬೀಗ ಮುರಿದು 2 ಲಕ್ಷ ಮೌಲ್ಯದ 5.50 ಪವನ್ ನೆಕ್ಲೆಸ್ ಸರವನ್ನು ಕಳವು ಮಾಡಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave A Reply

Your email address will not be published.