ಪಿಕ್ ಪಾಕೆಟ್ ಆರೋಪದಲ್ಲಿ ಬಂಧನಕ್ಕೊಳಗಾದ ಸಿನಿಮಾ ನಟಿ!

Share the Article

ಬಂಗಾಳದ ನಟಿ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಪಶ್ಚಿಮ ಕೋಲ್ಕತ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಶನಿವಾರ ರಾತ್ರಿ (ಮಾರ್ಚ್ 12) ನಡೆದ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳದಲ್ಲಿ ರೂಪಾ ದತ್ತ ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಿಳೆಯೊಬ್ಬಳು ಕಸದ ಬುಟ್ಟಿಗೆ ಬ್ಯಾಗ್ ಎಸೆಯುವುದನ್ನು ಕಂಡ ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಗಮನಿಸಿದ್ದು, ತಕ್ಷಣ ಅನುಮಾನಗೊಂಡು ಪೊಲೀಸ್ ಮಹಿಳೆಯನ್ನು ವಿಚಾರಿಸಿದಾಗ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ.

ಇದೇ ಸಂದರ್ಭದಲ್ಲಿ ಆಕೆಯನ್ನು ತಪಾಸಣೆಗೊಳಪಡಿಸಿದಾಗ ಬ್ಯಾಗ್‌ನಲ್ಲಿ ಅನೇಕ ಪಾಕೆಟ್ ಇರುವುದು ಬೆಳಕಿಗೆ ಬಂದಿದೆ. ಒಟ್ಟು 75 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Leave A Reply