ಪಂಚರಾಜ್ಯ ಚುನಾವಣೆ ಎಫೆಕ್ಟ್ : ಅಧಿವೇಶನದಲ್ಲಿ ರಾಮ ನಾಮ| ಜೈ ಘೋಷಣೆಗಳೊಂದಿಗೆ ಮೋದಿ ಆಗಮನ

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣಾ
ಫಲಿತಾಂಶದ ಪರಿಣಾಮ ಇಂದು ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತದ ಲೋಕಸಭೆಯಲ್ಲೂ ಕಂಡುಬಂದಿದೆ.

 

ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಂತೆ ತಕ್ಷಣ ಬಿಜೆಪಿ ಸಂಸದರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು ಮೋದಿ-ಮೋದಿ ಘೋಷಣೆಗಳನ್ನ ಕೂಗಲು ಆರಂಭಿಸಿದರು. ಈ ವೇಳೆ ಪ್ರಧಾನಿಯವರು ತಮ್ಮ ಸಂಸದರ ಶುಭಾಶಯಗಳನ್ನ ಕೈ ಜೋಡಿಸಿ ಸ್ವೀಕರಿಸಿದರು. ಇನ್ನು ಸುಮಾರು 30 ಸೆಕೆಂಡುಗಳ ಕಾಲ ನಡೆದ ಘೋಷವಾಕ್ಯದಲ್ಲಿ ಜೈ ಶ್ರೀರಾಮ್ ಘೋಷಣೆಗಳೂ ಮೊಳಗಿದವು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಖುಷಿಯಿಂದ ಕಾಣಿಸಿಕೊಂಡರು.

Leave A Reply

Your email address will not be published.