ಕುಡಿದು ಬಂದು ಶಾಲಾ ಬಾಲಕಿ, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ ಶಿಕ್ಷಕ| ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಸಸ್ಪೆಂಡ್

ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದವನನ್ನು ಅಮಾನತುಗೊಳಿಸಲಾಗಿದೆ.

 

ಈ ಘಟನೆ ಛತ್ತೀಸ್ ಗಢದ ಜಸ್ಪುರದಲ್ಲಿ ನಡೆದಿದೆ.

ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ದಿನೇಶ್ ಕುಮಾರ್ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ.

ಅಲ್ಲದೇ ಶಾಲೆಯಲ್ಲಿ ಮದ್ಯ ಸೇವಿಸಿ ಬಾಲಕಿಯರು, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ. ಈ ಶಿಕ್ಷಕನ ದುರ್ನಡತೆಯ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕ‌ ಮದ್ಯಪಾನ ಮಾಡಿ ವಿದ್ಯಾರ್ಥಿಗಳನ್ನು ಥಳಿಸಿದ್ದಲ್ಲದೇ, ದುರ್ನಡತೆ ತೋರಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.