ಮಹಿಳಾ ಖಾಜಿಯಿಂದ ಮುಸ್ಲಿಂ ಮದುವೆ ಶಾಸ್ತ್ರ| ಮಾಜಿ ರಾಷ್ಟ್ರಪತಿ ಮರಿ ಮೊಮ್ಮಗನ ನಿಕಾಹ್ ನಾಮಾದಲ್ಲಿ ಅದ್ಭುತ ಬದಲಾವಣೆ|
ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ.
ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ ಖಾಜಿ ನೆರವೇರಿಸಿದ್ದು ಬಹಳ ಆಶ್ಚರ್ಯಕ್ಕೆ ಈಡು ಮಾಡಿಕೊಟ್ಟಿದೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯೋಜನಾ ಆಯೋಗದ ಮಾಜಿ ಸದಸ್ಯೆಯಾಗಿರುವ ಸೈದಾ ಸಯೇದೇನ್ ಹಮೀದ್ ಈ ಖಾಜಿ ಜವಾಬ್ದಾರಿ ಹೊತ್ತುಕೊಂಡವರು. ರಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ವನ್ನು ನೆರವೇರಿಸಿದರು.
ಇಂಥಹ ಅಪರೂಪದ ವೀಡಿಯೋವನ್ನು ನೋಡಿದ ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು , ‘ ಕಾಲ ಬದಲಾಗುತ್ತಿದೆ’ ಎಂದು ಕಮೆಂಟ್ ಮಾಡಿದ್ದರೆ ಇನ್ನೊಬ್ಬರು ‘ ಸುಂದರ ದೃಶ್ಯ’ ಎಂದು ಬರೆದಿದ್ದಾರೆ.
ಈ ಅಪರೂಪದ ಘಟನೆಯ ವೀಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ.