ಬೆಳ್ತಂಗಡಿ: ಧರ್ಮಸ್ಥಳ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ವರ್ಗಾವಣೆ

ಧರ್ಮಸ್ಥಳ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ವರ್ಗಾವಣೆಯಾಗಿದೆ. ಠಾಣೆಯ ಪಿಎಸ್‌ಐ-2 ಮತ್ತು ಹೆಡ್ ಕಾಸ್ಟೇಬಲ್ ಅವರನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದ್ದು, ಇಂದು ಇಬ್ಬರಿಗೂ ಬೀಳ್ಕೊಡುಗೆ ಮಾಡಲಾಗಿದೆ.

 

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ-2 ಆಗಿದ್ದ ಚಂದ್ರಶೇಖರ್ ಅವರನ್ನು ಮಂಗಳೂರು ಅರಣ್ಯ ಸಂಚಾರಿ ದಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಕಳೆದ ಆರು ವರ್ಷ ಎರಡು ತಿಂಗಳು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನೇಬಲ್ ವಿಶ್ವನಾಥ್ ನಾಯ್ಕ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪಿಎಸ್‌ಐ ಚಂದ್ರಶೇಖರ್ ಅವರು ಕಳೆದ ಎರಡು ವರ್ಷ ಮೂರು ತಿಂಗಳು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ವಿಶ್ವನಾಥ್ ನಾಯ್ಕ ಅವರು ಮಂಗಳೂರು ಸಂಚಾರ ಪೊಲೀಸ್ ಠಾಣೆ, ಬೆಳ್ತಂಗಡಿ, ವೇಣೂರು ಮುಂತಾದ ಕಡೆ ಉತ್ತಮವಾಗಿ ಸೇವೆ ಸಲ್ಲಿಸಿದ್ದರು.

ಪಿಎಸ್‌ಐ ಚಂದ್ರಶೇಖರ್ ಮತ್ತು ಹೆಡ್ ಕಾಸ್ಟೇಬಲ್
ವಿಶ್ವನಾಥ್ ನಾಯ್ಕ ಅವರಿಗೆ ಇಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ-1 ಕೃಷ್ಣಕಾಂತ್ ಪಾಟೀಲ್ ಮತ್ತು ಸಿಬ್ಬಂದಿಗಳು ಸೇರಿ ಬೀಳ್ಕೊಡುಗೆ ನೀಡಿದರು.

Leave A Reply

Your email address will not be published.