ಸುಳ್ಯ : ಟೆಂಪೋ – ದ್ವಿಚಕ್ರ ವಾಹನ ಡಿಕ್ಕಿ| ಸವಾರ ಗಂಭೀರ

Share the Article

ಸುಳ್ಯ : ಗುಜರಿ ಸಾಮಾಗ್ರಿಗಳನ್ನು ಸಾಗಾಟ ಮಾಡುವ ಆಟೋ ರಿಕ್ಷಾ ಟೆಂಪೋ – ದ್ವಿಚಕ್ರ ವಾಹನ ಡಿಕ್ಕಿಯಾಗಿ‌ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ‌ ಬಾಳೆ ಮಕ್ಕಿ ಟ್ಯಾಕ್ಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಸೋಣಂಗೇರಿ ಮೂಲದ ವ್ಯಕ್ತಿಯೋರ್ವರ ಗುಜರಿ ಸಾಮಾಗ್ರಿಗಳನ್ನು ಸಾಗಾಟ ಮಾಡುವ ಆಟೋರಿಕ್ಷಾ ಟೆಂಪೋ ಮೂಲಕ ಸುಳ್ಯ ಬಾಳೆಮಕ್ಕಿ ಬಳಿ ಹಳೇಗೇಟು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಟೆಂಪೋ ರಿಕ್ಷಾದ ಹಿಂಭಾಗಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಗುದ್ದಿದ ಪರಿಣಾಮ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಟ್ಯಾಕ್ಸಿ ನಿಲ್ದಾಣದ ಕೆಲ ಚಾಲಕರು ಸೇರಿ ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಶಿವ ಆಂಬುಲೆನ್ಸ್ ವಾಹನದ ಮೂಲಕ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply