RBI ನಿಂದ ಪ್ರಕಟಣೆ : ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ RBI ಸೂಚನೆ…!

Share the Article

ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಅಡಿಟ್ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.

ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್ ಬಿ ಐ ನಿಂದ ನಿರ್ದಿಷ್ಟ ಅನುಮತಿಗೆ ಒಳಪಟ್ಟು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಐಟಿ ವ್ಯವಸ್ಥೆಯ ಸಮಗ್ರ ಲೆಕ್ಕಪರಿಶೋಧನೆ ನಡೆಸಲು ಅಡಿಟ್ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್ ಗೆ ಸೂಚಿಸಲಾಗಿದೆ ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ 1949 ರ ಸೆಕ್ಷನ್ 35 ಎ ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕ್ರಮ ಎಂದು ಸುತ್ತೋಲೆಯನ್ನು ಆರ್ ಬಿಐ ತನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.

Leave A Reply