ಪಾಕ್ ಯುವತಿಯನ್ನು ಮದುವೆಯಾದ ಕೇರಳ ಮೂಲದ ಉಗ್ರ !! | ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತನಾದ

ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದ ಕೇರಳ ಮೂಲದ ಉಗ್ರನೊಬ್ಬ ಮದುವೆಯಾದ ದಿನವೇ ಬಾಂಬ್ ದಾಳಿಯಲ್ಲಿ ಹತ್ಯೆಯಾದ ಘಟನೆ ಬೆಳಕಿಗೆ ಬಂದಿದೆ.

 

ನಜೀಬ್ ಅಲ್ ಹಿಂದಿ(23) ಮೃತಪಟ್ಟ ಉಗ್ರ ಎಂದು ಗುರುತಿಸಲಾಗಿದೆ.

ಈತ ಕೇರಳ ಮೂಲದವನಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಮಹಿಳೆಯನ್ನು ಮದುವೆಯಾದ ಕೆಲವೇ ಗಂಟೆಯಲ್ಲಿ ನಜೀಬ್ ಸಾವನ್ನಪ್ಪಿದ್ದಾನೆ. ಈತ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‍ನ ಅಫ್ಘಾನಿಸ್ತಾನ ಮೂಲದ ಶಾಖೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್‍ಗೆ ಸೇರಿದವನಾಗಿದ್ದಾನೆ.

ಇಸ್ಲಾಮಿಕ್ ಸ್ಟೇಟ್ ಲೇಖನ ಪ್ರಕಾರ, ನಜೀಬ್ ಸ್ವಯಂಪ್ರೇರಿತನಾಗಿ ಭಾರತದಿಂದ ಅಫ್ಘಾನಿಸ್ತಾನದ ಖೊರಾಸನ್ ಪ್ರದೇಶಕ್ಕೆ ಬಂದಿದ್ದನು. ಉಗ್ರರನ್ನು ಭೇಟಿ ಮಾಡಿ, ಅಲ್ಲೇ ಉಳಿದಿದ್ದ. ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತಿದ್ದ. ಹುತಾತ್ಮನಾಗುವುದರ ಬಗ್ಗೆಯೇ ಯೋಚಿಸುತ್ತಿದ್ದನು ಎಂದು ಹೇಳಲಾಗಿದೆ.

ನಜೀಬ್‍ಗೆ ಮದುವೆಯಾಗುವಂತೆ ಆತನ ಸ್ನೇಹಿತರು ಒತ್ತಾಯಿಸಿದ್ದರು. ಹೀಗಾಗಿ ಪಾಕಿಸ್ತಾನಿ ಕುಟುಂಬದ ಯುವತಿಯೊಂದಿಗೆ ಮದುವೆಯಾಗಿದ್ದನು. ಅವರೂ ಕೂಡ ಐಸ್‍ಕೆಪಿಯೊಂದಿಗೆ ಸಂಬಂಧ ಹೊಂದಿದ್ದರು. ನಜೀಬ್ ಹಾಗೂ ಆ ಯುವತಿಯ ಮದುವೆಯ ದಿನವೇ ಶತ್ರುಗಳು ಅವರ ಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆತ್ಮಹತ್ಯಾ ದಾಳಿಯ ಬಗ್ಗೆ ನಜೀಬ್ ಮಾತನಾಡಿದ್ದ. ಒತ್ತಾಯದ ಮೇರೆಗೆ ಮದುವೆಯಾದ ನಜೀಬ್ ನಂತರ ಶತ್ರುಗಳೊಂದಿಗೆ ಹೋರಾಡಲು ತೆರಳಿ, ಅಲ್ಲಿ ಮೃತಪಟ್ಟ ಎಂದು ತಿಳಿದುಬಂದಿದೆ. ದಾಳಿ ನಡೆಸಿದವರ ಕುರಿತು ಯಾವುದೇ ಮಾಹಿತಿ ಇಲ್ಲ. ದೇವರಲ್ಲಿ ನಂಬಿಕೆ ಇಲ್ಲದವರು ದಾಳಿ ಮಾಡಿದರು ಎಂದಷ್ಟೇ ಲೇಖನದಲ್ಲಿ ಬರೆಯಲಾಗಿದೆ.

Leave A Reply

Your email address will not be published.