ವರದಕ್ಷಿಣೆ ಕಿರುಕುಳ ಅನುಮಾನ | ವಕೀಲೆ ಅನುಮಾನಾಸ್ಪದ ಸಾವು

ಮೈಸೂರು : ವಕೀಲೆ ಚಂದ್ರಕಲಾ ( 32) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

 

ಮೈಸೂರಿನ ರಾಮಕೃಷ್ಣ ನಿವಾಸಿಯಾಗಿರುವ ಚಂದ್ರಕಲಾ 2019 ರಲ್ಲಿ ಪ್ರದೀಪ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ 6 ತಿಂಗಳ ಮಗು ಇದೆ ಎನ್ನಲಾಗಿದೆ. ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರದಲ್ಲಿ ವರದಕ್ಷಿಣೆ ಕಿರುಕುಳ ಆಗಾಗ ನಡೆಯುತ್ತಿತ್ತು. ಇದರಿಂದ ಮನನೊಂದು ಚಂದ್ರಕಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಚಂದ್ರಕಲಾ ಪತಿ ಪ್ರದೀಪ್ ತನ್ನ ಮಾವನಿಗೆ ಕರೆ ಮಾಡಿ ಆಸ್ಪತ್ರೆಗೆ ಬರಲು ಹೇಳಿದ್ದಾನೆ. ಆದರೆ ಅಷ್ಟರಲ್ಲಾಗಲೇ ಚಂದ್ರಕಲಾ ಮೃತಪಟ್ಟಿದ್ದು, ಇದೊಂದು ವರದಕ್ಷಿಣೆ ಕಿರುಕುಳದಿಂದಾಗಿ ನಡೆದಿರುವ ಕೊಲೆ ಎಂದು ಮೃತಳಾ ಪೋಷಕರು ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರದೀಪ್ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಪ್ರದೀಪ್ ತಾಯಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ.

Leave A Reply

Your email address will not be published.