ದೇಶದಲ್ಲಿ ಮೊಟ್ಟ ಮೊದಲ ” ಡ್ರೋನ್ ಶಾಲೆ” ಆರಂಭ|

ದೇಶದಲ್ಲಿ ಮೊಟ್ಟ ಮೊದಲ ಡ್ರೋನ್ ಶಾಲೆಯು ಆರಂಭಗೊಂಡಿದ್ದು, ಮಾರ್ಚ್ 10 ರಂದು ಗ್ವಾಲಿಯರ್ ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.

ಈ ಡ್ರೋನ್ ಶಾಲೆಯನ್ನು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾಧ್ಯ ಸಿಂಧಿಯಾ ಇದನ್ನು ಲೋಕಾಪರ್ಣೆಗೊಳಿಸಿದರು.

ಈ ರೀತಿಯ ತಂತ್ರಜ್ಞಾನವು ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲಿದೆ ಎಂದು ಹೇಳುತ್ತಾ ಈ ಹೊಸ ಪ್ರಯತ್ನದ ಬಗ್ಗೆ ಇಬ್ಬರೂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.

ರಾಜ್ಯದ ಮೊದಲ ಡ್ರೋನ್ ಶಾಲೆಯನ್ನು ಗ್ವಾಲಿಯರ್ ನಲ್ಲಿ ಉದ್ಘಾಟಿಸಲಾಗಿದೆ. ಇದನ್ನು ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದ್ದರಿಂದ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಸಂಶಯವಿಲ್ಲ.

Leave A Reply

Your email address will not be published.