ತೊಕ್ಕೊಟ್ಟು : ಬುರ್ಖಾಧಾರಿ ಮಹಿಳೆಯರಿಂದ ಬಟ್ಟೆ ಪ್ಯಾಕೆಟ್ ಕಳ್ಳತನ ಮಾಡುವ ಸಿಸಿಟಿವಿ ದೃಶ್ಯ ಸೆರೆ!

Share the Article

ಉಳ್ಳಾಲ : ತೊಕ್ಕೊಟ್ಟಿನ ಸ್ಟುಡಿಯೋ ಕಮ್ ವಸ್ತ್ರ ಮಳಿಗೆಯೊಂದರಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೈ ಚಳಕ ತೋರಿದ್ದು, ನೈಟಿಗಳನ್ನು ಬುರ್ಖಾದ ಒಳಗೆ ಇಟ್ಟು ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿ ಜಾಲತಾಣದಲ್ಲಿ ವೈರಲ್ ಆಗಿದೆ.

ತೊಕ್ಕೊಟ್ಟು ಒಳಪೇಟೆಯ ಚರ್ಚ್ ರಸ್ತೆಯಲ್ಲಿರುವ ವೆಲಂಕಣಿ ಲೇಡೀಸ್ ಸೆಲೆಕ್ಷನ್ಸ್ ಕಮ್ ಸ್ಟುಡಿಯೋದಲ್ಲಿ ಮಾ‌.7 ರ ಮಧ್ಯಾಹ್ನ ಈ ಘಟನೆ ನಡೆದಿದೆ.

ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಕೈಚಳಕ ತೋರಿಸಿದ್ದಾರೆ.

ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಕೈಚಳಕ ತೋರಿಸಿದ್ದಾರೆ.

ಮಳಿಗೆಯ ಮಾಲಕರು ಅನುಮಾನ ಬಂದು ರಾತ್ರಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳಾ ಸಿಬ್ಬಂದಿ ಹೇಳಿಕೆಯ ಪ್ರಕಾರ, ಇಬ್ಬರೂ ಬ್ಯಾರಿ ಭಾಷೆ ಮಾತನಾಡುತ್ತಿದ್ದುದಾಗಿ ತಿಳಿದು ಬಂದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply