ರಾಜ್ಯದಲ್ಲಿ ಮತ್ತೆ ಇರುವಿಕೆಯನ್ನು ತೋರಿಸಿಕೊಂಡ ಮಂಗನ ಖಾಯಿಲೆ!! ಜನರಲ್ಲಿ ಹೆಚ್ಚಿದ ಆತಂಕ-ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದೆ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕಳೆದ ವರ್ಷ ಮಲೆನಾಡಿಗರ ನಿದ್ದೆಗೆಡಿಸಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಕೆಲವೆಡೆ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ.

 

ಶಿವಮೊಗ್ಗ ಜಿಲ್ಲೆಯ ಇಬ್ಬರು ಮಹಿಳೆಯರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದು ಪರೀಕ್ಷಿಸಿದ ವೈದ್ಯರು ಮಂಗನ ಕಾಯಿಲೆ ಎಂದು ದೃಢಪಡಿಸಿದ್ದು, ಇಬ್ಬರಲ್ಲಿ ಒಬ್ಬರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದರು.

ಒಟ್ಟಾರೆಯಾಗಿ ಕಳೆದ ಬಾರಿ ರಾಜ್ಯದಲ್ಲಿ ಹೆಚ್ಚು ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಕೆಲವರಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಇಳಿದಿದೆ.

Leave A Reply

Your email address will not be published.