ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ | ಬೇಸರ ವ್ಯಕ್ತಪಡಿಸಿದ ನಾಗ ಚೈತನ್ಯ ಕುಟುಂಬ

ನಟಿ ಸಮಂತಾ ಮತ್ತು ನಾಗಚೈತನ್ಯ 2021 ಅಕ್ಟೋಬರ್ 2 ರಂದು ವಿಚ್ಛೇದನ ಪಡೆದುಕೊಂಡು ದೂರವಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲಿಂದ ಇಲ್ಲಿ ತನಕ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ಈ ಜೋಡಿಯ ಸ್ನೇಹ ಕೂಡ ಎಲ್ಲೂ ಕಾಣಿಸಿಲ್ಲ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋದ ನಟಿ ತಮ್ಮ ಮದುವೆ ಸೀರೆಯನ್ನು ಹಿಂದಿರುಗಿಸಿದ್ದಾರಂತೆ. ಮದುವೆಯಲ್ಲಿ ನಾಗಚೈತನ್ಯ ಮನೆಯವರು ಕೊಟ್ಟಿದ್ದ ರೇಷ್ಮೆ ಸೀರೆಯನ್ನು ವಾಪಸ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

 

ಇನ್ನು ಸಮಂತಾ ಈ ನಡೆಗೆ ಅಕ್ಕಿನೇನಿ ಕುಟುಂಬ ವಿರೋಧ ವ್ಯಕ್ತಪಡಿಸಿದೆಯಂತೆ. ಮದುವೆ ಸೀರೆಯನ್ನು ವಾಪಸ್ ಕೊಟ್ಟಿದ್ದು ಕುಟುಂಬಕ್ಕೆ ಹೆಚ್ಚಿನ ನೋವುಂಟು ಮಾಡಿದೆಯಂತೆ.

ಸಮಂತಾ ಅವರಿಂದ ಈ ನಡೆಯನ್ನು ನಿರೀಕ್ಷಿಸಿಲ್ಲ ಎಂಬ ಮಾತು ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.