ಕ್ಯಾಮೆರಾದ ಮುಂದೆ ಸಾಮೂಹಿಕವಾಗಿ ಬೆತ್ತಲಾದ ಮಹಿಳೆಯರು | ಪುಟಿನ್ ವಿರುದ್ಧ ಪ್ರತಿಭಟನೆ, ಯುದ್ಧ ನಿಲ್ಲಿಸುವಂತೆ ಆಗ್ರಹ | ವೀಡಿಯೋ ವೀಕ್ಷಿಸಿ….!!
ಮಾಸ್ಕೋ: ಉಕ್ರೇನ್ ನ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅಪಾರ ಪ್ರಮಾಣದ ಸಾವು-ನೋವುಗಳಾಗಿವೆ. ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ ವಿರುದ್ಧ ಟಾಪ್‍ಲೆಸ್ (Topless protest) ಗೆ ಇಳಿದಿದ್ದಾರೆ. ಬರೆದು ಎದೆ ತೋರಿಸುವ ಮೂಲಕ ಪುಟ್ಟನಿಗೆ ವಿರುದ್ಧವಾಗಿ ಎದೆಗಾರಿಕೆಯ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಪ್ಯಾರಿಸ್‍ನ ಐಫೆಲ್ ಟವರ್‌ನ ಮುಂದೆ ಅನೇಕ ಮಹಿಳೆಯರು ಟಾಪ್‍ಲೆಸ್ ಆಗಿ ಪ್ರತಿಭಟನೆ ನಡೆಸಿದ್ದಾರೆ. ಅವರು ತಮ್ಮ ಟಾಪ್ ಬಟ್ಟೆ ಕಳಚಿ ಮೈದಾನಕ್ಕೆ ಇಳಿದಿದ್ದಾರೆ. ಎದೆಯ ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿ, ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದಾರೆ. ಸ್ಟಾಪ್ ವಾರ್ ಪುಟಿನ್, ಯುದ್ಧದ ವಿರುದ್ಧ ಸ್ತ್ರೀವಾದಿಗಳು, ಸ್ಲಾವಾ ಉಕ್ರೇನಿ ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ಎದೆಯ ಮೇಲೆ ಬರೆದುಕೊಂಡು ಯುದ್ಧ ಪೀಡಿತ ಉಕ್ರೇನಿಯರ ವಿರುದ್ಧ ಮೃದುಲ ಭಾವ ತೋರಿಸಿದ್ದಾರೆ. ಸ್ಥಳೀಯ ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ.
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ http://pic.twitter.com/dRpidMSANo
ಯುದ್ಧ ಆರಂಭವಾದಂದಿನಿಂದಲೂ ದಿನವೂ ಒಂದಲ್ಲ ಒಂದು ಪಶ್ಚಿಮದ ದೇಶಗಳು, ವಿವಿಧ ಸರ್ಕಾರಗಳು ಮತ್ತು ಸಂಸ್ಥೆಗಳು ಒಂದರ ನಂತರ ಒಂದರಂತೆ ರಷ್ಯಾಗೆ ವಿವಿಧ ರೀತಿಯಲ್ಲಿ ನಿರ್ಬಂಧ ಹೇರುವ ಮೂಲಕ ಬಹಿಷ್ಕರಿಸಲು ಆರಂಭಿಸಿವೆ. ಯಾವ ಬಹಿಷ್ಕಾರವೂ ರಷ್ಯಾ ಇಲ್ಲಿಯ ತನಕ ಬಗ್ಗಿಲ್ಲ. ಇಂತಹ ಸಮಯದಲ್ಲಿ ರಷ್ಯಾ ವಿರುದ್ಧ ಪ್ಯಾರಿಸ್‍ನಲ್ಲಿನ ಮಹಿಳೆಯರ ಈ ಟಾಪ್‍ಲೆಸ್ ಪ್ರತಿಭಟನೆಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಈ ಮಹಿಳೆಯರು ಯುದ್ಧಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.