22 ನೇ ವಯಸ್ಸಿಗೆ ಇಹಲೋಕಕ್ಕೆ ಗುಡ್ ಬೈ ಹೇಳಿದ ಖ್ಯಾತ ಯುಟ್ಯೂಬರ್!! ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಲಿಲ್ ಬೋ ಇನ್ನಿಲ್ಲ

Share the Article

ಆಸ್ಟ್ರೇಲಿಯಾದ ಖ್ಯಾತ ಯು-ಟ್ಯೂಬರ್ ಲಿಲ್ ಬೋ ವೀಪ್ ಇನ್ನಿಲ್ಲ ಎಂಬ ಸುದ್ದಿಯೊಂದು ಹರಿದಾಡಿದ ಬೆನ್ನಲ್ಲೇ ಆಕೆ ಮೃತಪಟ್ಟ ಬಗ್ಗೆ ಆಕೆಯ ತಂದೆ ಸ್ಪಷ್ಟಪಡಿಸಿದ್ದಾರೆ.

ಖಿನ್ನತೆ, ಮಾದಕ ವ್ಯಸನ ದಿಂದಾಗಿ ಆಘಾತಕ್ಕೆ ಒಳಗಾಗಿ ಬದುಕಲು ಹೋರಾಟ ನಡೆಸುತ್ತಿದ್ದ ಲಿಲ್ ಬೋ ತನ್ನ 22 ನೇ ವಯಸ್ಸಿನಲ್ಲಿ ಕೊನೆಯುಸಿರಿಳೆದಿದ್ದಾರೆ.

ಈ ಬಗ್ಗೆ ಆಕೆಯ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅಮೇರಿಕ ದಿಂದ ಲಿಲ್ ನನ್ನು ವಾಪಾಸ್ ಕರೆಸಿಕೊಂಡು ನಾವು ಆಕೆಯ ಹೋರಾಟ ಮಾಡುತ್ತಿದ್ದೆವು, ಆದರೆ ವಿಧಿಯಾಟ ಆ ಹೋರಾಟದಲ್ಲಿ ನಾವು ಪರಾಭವಗೊಂಡಿದ್ದು, ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave A Reply