ಶೇನ್ ವಾರ್ನ್ ಸಾವಿನ ಕಾರಣ ಬಯಲು
ಆಸ್ಟ್ರೇಲಿಯಾದ ಕ್ರಿಕೆಟರ್ ಶೇನ್ ವಾರ್ನ್ ಅವರ ಸಾವು ಸಹಜ ಕಾರಣಗಳಿಂದಾಗಿದೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಘೋಷಿಸಿದ್ದಾರೆ.
ಶವಪರೀಕ್ಷೆಯ ಫಲಿತಾಂಶ ನಡೆಸಿದ್ದು, ವಾರದ ಹಿಂದಷ್ಟೇ ಹೃದಯ ಸಂಬಂಧಿ ವಿಚಾರವಾಗಿ ವೈದ್ಯರನ್ನು ಭೇಟಿ ಮಾಡಿದ್ದರು ವಾರ್ನ್.
ಇನ್ನು ಅವರ ಕುಟುಂಬಸ್ಥರು ಕೂಡ ಆಸ್ಟ್ರೇಲಿಯಾ ಬಿಡುವ ಮುನ್ನ ವಾರ್ನ್ ಅವರು ಹೃದಯ ಸಂಬಂಧಿತ ಕೆಲವು ಸಮಸ್ಯೆಗಳು ಮತ್ತು ಅಸ್ತಮಾದಿಂದ ಬಳಲುತ್ತಿದ್ದರು ಎಂದು ಥಾಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ತಮ್ಮ ಕೋಣೆಯಲ್ಲಿ ಹಠಾತ್ ಹೃದಯಾಘಾತದಿಂದ ವಾರ್ನ್ ನಿಧನರಾಗಿದ್ದರು.