1400 ಕಿ.ಮೀ. ದೂರವನ್ನು ಏಕಾಂಗಿಯಾಗಿಯೇ ನಡೆದು ಬೇರೆ ರಾಷ್ಟ್ರ ತಲುಪಿದ 11 ವರ್ಷದ ಬಾಲಕ !
ಯುಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಲಕ್ಷಾಂತರ ಸ್ಥಳೀಯ ಜನರು ದೇಶವನ್ನು ತೊರೆದು ಅಕ್ಕ ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಗ್ನೇಯ ಯುಕ್ರೇನ್ ನ ಝಪೊರೊಝೈ ನಗರದ 11 ವರ್ಷದ ಬಾಲಕನೊಬ್ಬ ಪಶ್ಚಿಮದ ನೆರೆಯ ರಾಷ್ಟ್ರ ಸ್ಲೊವಾಕಿಯಾಗೆ ನಡೆದು ಹೋಗಿರುವುದು ಗಮನ ಸೆಳೆದಿದೆ.
ಇಲ್ಲಿ ಮುಖ್ಯ ಕಾರಣವೇನೆಂದರೆ ಬಾಲಕನ ಏಕಾಂಗಿ ಪಯಣ. ಈ ಬಗ್ಗೆ ಯುಕ್ರೇನ್ ನ ಆಂತರಿಕ ವ್ಯವಹಾರಗಳ ಸಚಿವಾಲಯ ಮಂಗಳವಾರ ವರದಿ ನೀಡಿದೆ. ಯಾರೂ ಇಲ್ಲದೆ ತನ್ನ ಕೈಯಲ್ಲಿ ತಾಯಿ ಕೊಟ್ಟ ಪತ್ರ ಹಿಡಿದು ಬರೋಬ್ಬರಿ 1400 ಕಿ.ಮೀ. ನಡೆದುಕೊಂಡು ಹೋಗಿ ಸ್ಲೊವಾಕಿಯಾವನ್ನು ತಲುಪಿದ್ದಾನೆ. ತನ್ನ ನಗು, ಎದೆಗಾರಿಕೆ ಮತ್ತು ದೃಢ ನಿಶ್ಚಯದಿಂದ ಎಲ್ಲರ ಮನಸ್ಸು ಗೆಲ್ಲುವ ಮೂಲಕ ನಿಜವಾದ ಹೀರೋ ಆಗಿದ್ದಾನೆ.
ಬಾಲಕನ ಪಾಲಕರು ಇವನ ಜೊತೆ ಬರದ ಅನಿವಾರ್ಯತೆಯಲ್ಲಿದ್ದಾರೆ. ಪಾಲಕರು ಅನಿವಾರ್ಯವಾಗಿ ಉಕ್ರೇನ್ ನಲ್ಲಿ ಉಳಿಯಬೇಕಾದ ಪರಿಸ್ಥಿತಿ ಇದ್ದುದರಿಂದ ಸ್ವತಃ ಬಾಲಕನೇ ಗಡಿಗೆ ಹೋಗಿದ್ದಾನೆ.