ಶಾಕಿಂಗ್ ನ್ಯೂಸ್ : ಅಡುಗೆ ಮಾಡದ ಪತಿಯ ‘ಖಾಸಗಿ ಅಂಗ’ ಕ್ಕೆ ಮೀನಿನ ಕೊಕ್ಕೆ ಹಾಕಿದ ಪತ್ನಿ!

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಇದ್ದರೆ ಏನೂ ತಕರಾರು ಇರಲ್ಲ. ಆದರೆ ಕೆಲವೊಮ್ಮೆ ಕೆಲವೊಂದು ಮನಸ್ತಾಪಗಳು ದೊಡ್ಡದು ಮಾಡಿದರೆ ಜೀವನದ ಬಂಡಿ ಮುಂದೆ ಹೋಗಲ್ಲ.

ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಇಲ್ಲೊಬ್ಬ ಪತ್ನಿ ಅಡುಗೆ ಮಾಡದ ಪತಿಯನ್ನು ನಪುಂಸಕನನ್ನಾಗಿ ಮಾಡಿದ್ದಾಳೆ.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮಹಿಳೆಯ ಪತಿ ರಾತ್ರಿಯ ಊಟವನ್ನು ರೆಡಿ ಮಾಡಿರಲಿಲ್ಲ. ಆದರೆ ಪತಿ ಸ್ನೇಹಿತರೊಂದಿಗೆ ಮದ್ಯ ಸೇವನೆಗೆ ತೆರಳಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ, ಆತನ ಖಾಸಗಿ ಅಂಗವನ್ನು ಮೀನಿನ ಕೊಕ್ಕೆಯಲ್ಲಿ ಸಿಲುಕಿಸಿ ಮನೆಗೆ ಎಳೆದುಕೊಂಡು ಬಂದಿದ್ದಾಳೆ. ಪತಿ ದಾರಿಯುದ್ದಕ್ಕೂ ನರಳುತ್ತಾ ಮನೆಗೆ ಬಂದಿದ್ದಾನೆ.

ಥೈಲ್ಯಾಂಡಿನಲ್ಲಿ ಈ ಘಟನೆ ನಡೆದಿದೆ. 43 ವರ್ಷದ ಚನಿತಾ ಕುಡ್ ರೂಮ್ ಪತಿ ವೀವಿಂಗ್ ಮ್ಯೂಸಿಟ್ಸ್ ಖಾಸಗಿ ಅಂಗಕ್ಕೆ ಕೊಕ್ಕೆ ಹಾಕಿದ್ದಾಳೆ. ಚನಿತಾ ಕುಡ್ ರೂಮ್ ಕೆಲಸಕ್ಕೆ ಹೋಗಿದ್ದಳು. ಕೆಲಸದಿಂದ ಬಂದಿದ್ದ ಚನಿತಾಗೆ ತುಂಬಾನೇ ಹಸಿವಾಗಿತ್ತು. ಮನೆಯಲ್ಲೇ ಇದ್ದ ಗಂಡ ಅಡುಗೆ ಮಾಡಿಲ್ಲ ಎಂಬ ಕಾರಣದಿಂದ ಚನಿತಾ ಕೋಪಗೊಂಡಿದ್ದಳು.

ರಾತ್ರಿ ಎಷ್ಟೊತ್ತಾದರೂ ಪತಿ ಮನೆಗೆ ಬಾರದೇ ಇದ್ದಾಗ ಹುಡುಕಾಡಿದ್ದಾಳೆ. ಪತಿ ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವನೆ ಮಾಡುತ್ತಿರುವುದು ಕಂಡು ಕೋಪಗೊಂಡಿದ್ದಾಳೆ. ಅಲ್ಲಿಯೆ ಇಟ್ಟಿದ್ದ ಮೀನುಗಾರಿಕೆಯ ಕೊಕ್ಕೆಯಲ್ಲಿ ಗಂಡನ ಖಾಸಗಿ ಅಂಗವನ್ನು ಸಿಕ್ಕಿಸಿ, ಮನೆಗೆ ಎಳೆದುಕೊಂಡು ಬಂದಿದ್ದಾಳೆ.

ಇಡೀ ರಾತ್ರಿ ಪತಿ ನೋವಿನಿಂದ ನರಳಾಡಿದ್ದಾನೆ. ಕೊನೆಗೆ ಬೆಳಗ್ಗೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಚ್ 3 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಆಸ್ಪತ್ರೆಯಲ್ಲಿರುವ ಪತಿ ಪತ್ನಿಯ ಕೋಪ ತಣ್ಣಗಾಗುವವರೆಗೆ ಮನೆಗೆ ಹೋಗಲ್ಲ ಎಂದು ಹೇಳಿದ್ದಾಳೆ.

ಈ ಕಡೆ ಪತ್ನಿ ಚನಿತಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾಳೆ. ಆತನಿಗೆ ಕುಡಿಯುವುದು‌ ಒಂದೇ ನೆನಪು. ಮದ್ಯದ ಮುಂದೆ ತನ್ನ ಎಲ್ಲ ಜವಾಬ್ದಾರಿಗಳನ್ನು ಮರೆತು ಬಿಡುತ್ತಾನೆ. ನಾನು ಅಲ್ಲಿಗೆ ಹೋದಾಗ ಆತ ನನ್ನನ್ನು ನೋಡಲಿಲ್ಲ. ಹಾಗಾಗಿ ತಾಳ್ಮೆ ಕಳೆದುಕೊಂಡು ಆತನಿಗೆ ಪಾಠ ಕಲಿಸಲು ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ.

Leave A Reply

Your email address will not be published.