ನೆಟ್ಟಣ: ಬೃಹತ್ ರಕ್ತದಾನ ಶಿಬಿರ

Share the Article

ಕಡಬ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕಡಬ ತಾಲೂಕು ಘಟಕದ ವತಿಯಿಂದ ನವಜೀವನ ಪ್ರೆಂಡ್ಸ್ ಕ್ಲಬ್ ನೆಟ್ಟಣ, ಸೈಂಟ್ ಮೇರಿಸ್ ಚರ್ಚ್ ನೆಟ್ಟಣ, ಎಸ್.ಎಂ.ವೈ.ಎಸ್ ನೆಟ್ಟಣ, ಯುವ ತೇಜಸ್ಸು ಟ್ರಸ್ಟ್ ಪಂಜ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನೆಟ್ಟಣದ ಸೈಂಟ್ ಮೇರಿಸ್ ಚರ್ಚ್ನಲ್ಲಿ ನಡೆಯಿತು.
ನೆಟ್ಟಣ ಸೈಂಟ್ ಮೇರಿಸ್ ಚರ್ಚ್ ಧರ್ಮಗುರು ರೆ.ಫಾ ಆದರ್ಶ್ ಜೋಸೆಫ್ ಶಿಬಿರ ಉದ್ಘಾಟಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ. ಚೆರಿಯನ್, ಗೌರವಾದ್ಯಕ್ಷ ಮ್ಯಾಥ್ಯೂ ಟಿ.ಜಿ., ಘಟಕದ ಕಾರ್ಯದರ್ಶಿ ಸೋಮಶೇಖರ ಎನ್., ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷ ಶಿವಶಂಕರ್, ಏ.ಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ, ಸಿಬ್ಬಂದು ವರ್ಗ, ಮಾಜಿ ಸೈನಿಕ ಸಂಘದ ಸದಸ್ಯರು, ರಕ್ತದಾನಿಗಳು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 92 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಭಾರತೀಯ ಭೂಸೇನೆಯಿಂದ ನಿವೃತ್ತಿಯಾದ ಡೊಮೆನಿಕ್ ಅವರ ಪ್ರತೀ ದಿನದ ಚಿಕಿತ್ಸೆಗಾಗಿ ತುರ್ತು ರಕ್ತದ ಅವಶ್ಯಕತೆಯನ್ನು ನೀಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

Leave A Reply