ಬಾಯಿ ದುರ್ವಾಸನೆ ಸಮಸ್ಯೆಯಿಂದ ರೋಸಿ ಹೋಗಿದ್ದೀರಾ ??| ಹಾಗಿದ್ರೆ ಇಲ್ಲಿದೆ ನೋಡಿ ಈ ಸಮಸ್ಯೆಗೆ ಸುಲಭವಾದ ಮನೆಮದ್ದು

ಕೆಲವರಿಗೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಅಂತಹ ಸಮಸ್ಯೆಯಿಂದ ಹೇಗಾದರೂ ಪಾರಾಗಬೇಕೆಂದು ಹಲವು ರೀತಿಯ ಔಷಧಿಗಳ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಆದರೂ ಕೆಲವು ಸಮಸ್ಯೆಗಳು ಬೇಗ ನಮ್ಮ ಶರೀರದಿಂದ ಹೊರಟು ಹೋಗುವುದಿಲ್ಲ. ಅವುಗಳಲ್ಲಿ ಬಾಯಿ ದುರ್ವಾಸನೆ ಸಮಸ್ಯೆ ಕೂಡ ಒಂದು.

ಹೌದು. ಹೆಚ್ಚಿನವರಿಗೆ ಬಾಯಿ ದುರ್ವಾಸನೆ ಸಮಸ್ಯೆ ಕಾಡುತ್ತದೆ. ಬಾಯಿ ದುರ್ನಾತದಿಂದ ಜನರೊಂದಿಗೆ ಬೆರೆಯಲು ಮುಜುಗರವಾಗುತ್ತದೆ. ಇಂತಹ ಸಮಸ್ಯೆಗೆ ಮನೆಯಲ್ಲಿಯೇ ದೊರೆಯುವ ಅನೇಕ ಪದಾರ್ಥಗಳಿಂದ ನೈಸರ್ಗಿಕವಾಗಿ ತೊಲಗಿಸಬಹುದು.

ಮನೆಮದ್ದುಗಳು:

*ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ. ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ.
*ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.
*ನೀವು ಹೆಚ್ಚಾಗಿ ನೀರು ಸೇವನೆ ಮಾಡಬೇಕು. ಇದು ಬ್ಯಾಕ್ಟೀರಿಯಾವನ್ನು ಹೊರಹಾಕಿ ನಿಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣಿನ ರಸ, ಸಕ್ಕರೆ, ಉಪ್ಪನ್ನು ಮಿಶ್ರಣ ಮಾಡಿ ಸೇವನೆ ಮಾಡಿ.
*ನೀರಿಗೆ ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ. ಇದನ್ನು ಸೋಸಿಕೊಂಡ ಬಳಿಕ ನೀರನ್ನು ದಿನದಲ್ಲಿ ಒಂದು ಸಲ ಕುಡಿಯಿರಿ.
*ಜೇನುತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣವು ನಿಮ್ಮ ಬಾಯಿಯ ದುರ್ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.
*ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.
*ಆಗಾಗ್ಗೆ ದಾಲ್ಚಿನ್ನಿ ಸಣ್ಣ ತುಂಡನ್ನು ಬಾಯಿಯಲ್ಲಿ ಜಗಿಯುತ್ತಾ ಇರಿ.
*ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿ. ಇದು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

ಈ ನೈಸರ್ಗಿಕ ಮನೆಮದ್ದುಗಳನ್ನು ಕೆಲವು ದಿನಗಳ ಕಾಲ ಪ್ರಯೋಗಮಾಡಿ ನಿಮ್ಮ ಬಾಯಿ ದುರ್ವಾಸನೆ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಿ.

Leave A Reply

Your email address will not be published.