ಕೃಷಿ ಇಲಾಖೆಯ ವತಿಯಿಂದ ಪರಿಶಿಷ್ಠ ಜಾತಿ ಹಾಗೂ ಪಂಗಡದ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಹುಬ್ಬಳ್ಳಿ : ಕೃಷಿ ಇಲಾಖೆಯ ವತಿಯಿಂದ ಪರಿಶಿಷ್ಠ ಜಾತಿ ಹಾಗೂ ಪಂಗಡದ ರೈತರಿಗೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಉಪಕರಣಗಳ ಖರೀದಿಗೆ ಶೇಕಡಾ 90 ರಷ್ಟು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಉತ್ಪನ್ನಗಳ ಸಂಸ್ಕರಣಾ ಯೋಜನೆಯಡಿ ವಿವಿಧ ಸಾಮರ್ಥ್ಯದ ಹಿಟ್ಟಿನ ಗಿರಣಿ ಹಾಗೂ ಖಾರ ಕುಟ್ಟುವ ಮಷಿನ್,ಟ್ರಾಕ್ಟರ್ ಚಾಲಿತ ಬಿತ್ತನೆ ಕೂರಿಗೆ, ರೋಟವೇಟರ್,ನೇಗಿಲು, ಬಹುಬೆಳೆ ಒಕ್ಕಣೆ ಯಂತ್ರಗಳ ಖರೀದಿಗೆ ಕೃಷಿ ಇಲಾಖೆಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಮಾರ್ಚ್ 07 ರೂಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ, ರೈತರ ವಂತಿಕೆ ಪಾವತಿಸಿ ಯೋಜನೆಯ ಸದುಪಯೋಗವನ್ನು ಪಡೆಯಬಹುದು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಉತಾರ, ಜಾತಿ ಪ್ರಮಾಣ ಪತ್ರ, 20 ರೂ ಬಾಂಡ್ ಪೇಪರ್ ಹಾಗೂ ಮುಚ್ಚಳಿಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.