ನೀವು ಕೂಡ ಬಿಳಿ ಕೂದಲ ಸಮಸ್ಯೆಗೆ ತುತ್ತಾಗಿದ್ದೀರಾ?? | ಈ ಎರಡು ಎಲೆಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಿ !!
ಇತ್ತೀಚೆಗೆ ಸಾಮಾನ್ಯವಾಗಿ ಬಹುತೇಕರು ಅತಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಆದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಜನ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಲರ್ ಗಳ ಮೊರೆ ಹೋಗುತ್ತಾರೆ.
ಬಿಳಿ ಕೂದಲನ್ನು ಮರೆಮಾಚಲು ಜನರು ಅನೇಕ ದುಬಾರಿ ಕೂದಲು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಬಹುದು.
ತಜ್ಞರ ಪ್ರಕಾರ, ತುಳಸಿ ಎಲೆಗಳು ಮತ್ತು ಕರಿಬೇವಿನ ಎಲೆಗಳು ಕೂದಲನ್ನು ಕಪ್ಪಾಗಿಸಲು ಪ್ರಯೋಜನಕಾರಿ ಎಲೆಗಳಾಗಿವೆ. ತುಳಸಿಯಲ್ಲಿ ಆಂಟಿ-ಆಕ್ಸಿಡೆಂಟ್ಗಳು ಸಮೃದ್ಧವಾಗಿರುತ್ತವೆ. ಇದು ಬಿಳಿ ಕೂದಲನ್ನು ಕಪ್ಪಾಗಿಸಲು ತುಂಬಾನೇ ಸಹಾಯ ಮಾಡುತ್ತದೆ.
ತುಳಸಿ ಎಲೆಗಳನ್ನು ಬಳಸುವುದು ಹೇಗೆ??
*ಮೊದಲನೆಯದಾಗಿ, ತುಳಸಿ ಎಲೆಗಳನ್ನು ತೆಗೆದುಕೊಳ್ಳಿ.
*ಈಗ ನೆಲ್ಲಿಕಾಯಿ ಅಥವಾ ಅದರ ಎಲೆಗಳ ರಸವನ್ನು ತೆಗೆದುಕೊಳ್ಳಿ.
*ತುಳಸಿಎಲೆ , ನೆಲ್ಲಿಕಾಯಿ ಎಲೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡಿರುತ್ತಿರೋ ಅಷ್ಟೇ ಪ್ರಮಾಣದಲ್ಲಿ ಭೃಂಗರಾಜ ಅಥವಾ ಗರುಗ ಎಳೆಯನ್ನು ಬಳಸಿ.
*ಈಗ ಈ ಮೂರು ಎಲೆಗಳನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಕೂದಲಿಗೆ ಚೆನ್ನಾಗಿ ಹಚ್ಚಿ. ಇದು ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಕರಿಬೇವಿನ ಎಲೆಗಳನ್ನು ಹೇಗೆ ಬಳಸುವುದು ??
ಕರಿಬೇವಿನ ಎಲೆಗಳಲ್ಲಿ ಜೈವಿಕ-ಸಕ್ರಿಯ ಅಂಶಗಳು ಕಂಡುಬರುತ್ತವೆ. ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಎದುರಾಗುವ ಬಿಳಿ ಕೂದಲಿನ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಅಥವಾ ತಲೆಗೆ ಹಚ್ಚುವ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿದರೂ ಪರಿಣಾಮ ಬೀರುತ್ತದೆ.