ಯುದ್ಧ ವಿರಾಮ ಘೋಷಿಸಿದ ರಷ್ಯಾ!
ರಷ್ಯಾ ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದು, ಇಂದು ಕದನ ವಿರಾಮ ಘೋಷಣೆ ಮಾಡಿದೆ. ಉಕ್ರೇನ್ ನಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುವಾಗುವಂತಹ ಈ ಕದನ ವಿರಾಮ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.
ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ ರಷ್ಯಾದ ಈ ನಡೆ. ಈಗಾಗಲೇ ಉಕ್ರೇನ್ ನನ್ನು ವಶಪಡಿಸಿಕೊಂಡಿದೆಯಾ ರಷ್ಯಾ ಎಂಬ ಅನುಮಾನ ಮೂಡಿದೆ.
ಕೆಲವೊಂದು ಮೂಲಗಳ ಪ್ರಕಾರ ಉಕ್ರೇನ್ ನಲ್ಲಿ ವಿದೇಶೀ ಪ್ರಜೆಗಳ ಸುರಕ್ಷಿತ ತೆರವಿಗೆ ಒತ್ತಡ ಹೆಚ್ಚಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೇ 10 ದಿನಗಳಾದರೂ ರಷ್ಯಾ ಉಕ್ರೇನ್ ನ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಬಂದಿರಬಹುದು ಎಂಬ ಅನುಮಾನ ಕೂಡಾ ಇದೆ.