ಸುಳ್ಯ: ಹಿಟ್ ಅಂಡ್ ರನ್ ಪ್ರಕರಣ, ಗಾಯಾಳು ಸಾವು

Share the Article

ಹಿಟ್ ಅಂಡ್ ರನ್ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯದ ಸಂಪಾಜೆಯ ಗಡಿಕಲ್ಲು ಎಂಬಲ್ಲಿ ನಿನ್ನೆ ನಡೆದಿದೆ.

ಮೃತರನ್ನು ಸರೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಸರೋಜ್ ಕುಮಾರ್ ವಾಕಿಂಗ್ ಹೋದಾಗ ವಾಹನವೊಂದು ಬಂದು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಂಪಾಜೆಯ ಕುಕ್ಕೆಟ್ಟಿ ಮನೆ ನಿವಾಸಿ ಪಿರ್ಯಾದಿದಾರರಾದ ನಾರಾಯಣ ಅವರು ಗಡಿಕಲ್ಲು ಎಂಬಲ್ಲಿ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ರಸ್ತೆಬದಿ ಕಂಡ ಸರೋಜ್ ಕುಮಾರ್ ಅವರ ಎಡಗಾಲಿಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಏಟಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಥಮ ಚಿಕಿತ್ಸೆ ನಂತರ ದೂರುದಾರರು ಗಾಯಾಳುವನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಸರೋಜ್ ಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

Leave A Reply