ಶಿಕ್ಷಕ ಹುದ್ದೆ ಆಕಾಂಕ್ಷಿಗಳೇ ಗಮನಿಸಿ: ‘ಕೇಂದ್ರೀಯ ವಿದ್ಯಾಲಯ’ ದ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕೆ ಆಹ್ವಾನ
2022-23 ನೇ ಸಾಲಿನ ಒಪ್ಪಂದ ಆಧಾರದ ಮೇಲೆ ಅರೆಕಾಲಿಕ ಶಿಕ್ಷಕರ ನೇಮಕಾತಿಗಾಗಿ ಬೆಂಗಳೂರು ಕೇಂದ್ರೀಯ ವಿದ್ಯಾಲಯ ನೇಮಕ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳ ನೇಮಕಾತಿಗೆ ವಿದ್ಯಾಲಯದ ಆವರಣದಲ್ಲಿ ನೇರ ಸಂದರ್ಶನವನ್ನು ಮಾಡಲಿದೆ.
ನೇರ ಸಂದರ್ಶನದ ದಿನಾಂಕ : 07-03-2022, 08-03-2022 ರಂದು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ.
ಕೇಂದ್ರೀಯ ವಿದ್ಯಾಲಯ ಸಾಮಾನ್ಯವಾಗಿ ಈ ಕೆಳಗಿನ ವಿಷಯಗಳಿಗೆ ಅರೆಕಾಲಿಕ ಶಿಕ್ಷಕರನ್ನು ನೇಮಕ ಮಾಡುತ್ತದೆ :
ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ಸ್ ವಿಷಯಗಳು :
ಇಂಗ್ಲೀಷ್/ ಹಿಂದಿ/ ಭೌತಶಾಸ್ತ್ರ/ ರಸಾಯನಶಾಸ್ತ್ರ/ ಗಣಿತ/ ಜೀವಶಾಸ್ತ್ರ/ ಇತಿಹಾಸ/ ಭೂಗೋಳಶಾಸ್ತ್ರ/ ಅರ್ಥಶಾಸ್ತ್ರ/ ಪೊಲಿಟಿಕಲ್ ಸೈನ್ಸ್/ ಅಕೌಂಟೆನ್ಸಿ/ ವಾಣಿಜ್ಯ ಶಾಸ್ತ್ರ/ ಕಂಪ್ಯೂಟಿಂಗ್ ಸೈನ್ಸ್
ಟಿಜಿಟಿ ಮತ್ತು ಪ್ರೈಮರಿ ಟೀಚರ್ ವಿಷಯಗಳು :
ಇಂಗ್ಲೀಷ್ / ಹಿಂದಿ/ ಸಂಸ್ಕೃತ/ ಸೈನ್ಸ್/ ವಿಜ್ಞಾನ/ ಗಣಿತ/ ಸಮಾಜಶಾಸ್ತ್ರ ಹಾಗೂ ಇತರೆ.
ಸೂಚನೆ : ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರದ ಪ್ರತಿಯೊಂದಿಗೆ 02 ಭಾವಚಿತ್ರಗಳನ್ನು ತರಬೇಕು.
ಸಂದರ್ಶನಕ್ಕೆ ಹಾಜರಾಗುವ ವೇಳೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು:
ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ, ಬಿ.ಇಡಿ. ಅಂಕಪಟ್ಟಿ, ಸ್ನಾತಕೋತ್ತರ ಅಂಕಪಟ್ಟಿ, ಈ ದಾಖಲೆಗಳಲ್ಲಿ ಯಾವುದು ಅನ್ವಯವಾಗುವುದೋ ಆ ಎಲ್ಲ ದಾಖಲೆಗಳು.
ಇತರೆ ಹೆಚ್ಚಿನ ಮಾಜಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.