ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ : ಬೈಕ್ ಸವಾರ ಸ್ಥಳದಲ್ಲೇ ಸಾವು!

ದ್ವಿಚಕ್ರ ವಾಹನವು ಎತ್ತಿನ ಬಂಡಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆಯೊಂದು ನಡೆದಿದೆ.

 

ಅಮರದೇವರ ಗುಡ್ಡ ತಾಂಡಾದ ನಿವಾಸಿ ರಾಥೋಡ್ ( 26) ಎಂಬಾತ ಈ ಅಪಘಾತದಲ್ಲಿ ಸಾವಿಗೀಡಾದ ಬೈಕ್ ಸವಾರ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊರವಲಯದ ಚೋರನೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ವಿನಯ್ ಅಮರದೇವ ಗುಡ್ಡ ತಾಂಡಾದಿಂದ ಕೂಡ್ಲಿಗಿ ಕಡೆ ಹೊರಟಿದ್ದ ವೇಳೆ ಚೋರನೂರು ರಸ್ತೆಯ ಪಿರಾಮಿಡ್ ಬಳಿ ಈ ದುರ್ಘಟನೆ ಸಂಭವಿಸಿದೆ‌.

Leave A Reply

Your email address will not be published.