LPG ದರ ಏರಿಕೆ : ಶಿವರಾತ್ರಿ ಹಬ್ಬದ ದಿನದಂದೇ ತಟ್ಟಿದ ದರ ಏರಿಕೆ ಬಿಸಿ| ಸಿಲಿಂಡರ್ ಬೆಲೆಯ ದರ ಏರಿಕೆ ಪಟ್ಟಿ ಇಲ್ಲಿದೆ
ಇಂದು ಬೆಳಗ್ಗೆ ( ಮಾ.1) ವಾಣಿಜ್ಯ ಎಲ್ ಪಿಜಿ ಸಿಲಿಂಡರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ರಾಷ್ಟ್ರದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 105 ಏರಿಕೆ ಕಂಡಿದ್ದು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿದೆ. 5 ಕೆಜಿ ಸಿಲಿಂಡರಿನ ಬೆಲೆಯಲ್ಲಿ 27 ರೂಪಾಯಿ ಏರಿಕೆ ಕಂಡಿದ್ದು ರೂ.569 ಮುಟ್ಟಿದೆ.
ಕೇಂದ್ರ ಬಜೆಟ್ ಮಂಡನೆ ಫೆ.1 ರಂದು ನಡೆದಿತ್ತು. ಈ ಬಜೆಟ್ ಮಂಡನೆ ಆಗುವ ಮೊದಲು ಒಂದು ಗಂಟೆ ಮುಂಚೆ ವಾಣಿಜ್ಯ ಬಳಕೆಯ ಎಲ್ ಪಿಸಿ ಸಿಲಿಂಡರಿನ ಬೆಲೆಯಲ್ಲಿ 19.5 ರೂಪಾಯಿ ಇಳಿಕೆಯಾಗಿದ್ದು, ಇದೀಗ 105 ರೂಪಾಯಿ ಏರಿಕೆಯಾಗಿದ್ದು, ಇದರ ಬಿಸಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಇದೇ ರೀತಿ ಗ್ರಾಹಕರ ಜೇಬಿಗೂ ಇದರ ಬಿಸಿ ತಟ್ಟಲಿದೆ.
14 ಕೆಜಿಯ ಗೃಹಬಳಕೆಯ ಎಲ್ ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಾಗಲೇ ಗೃಹಬಳಕೆಯ ಎಲ್ ಪಿಜಿ ದರ ಗಗನಮುಖಿಯಾಗಿದ್ದು ಮತ್ತೆ ಏರಿಕೆಯಾದರೆ ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಬೆಲೆಯಲ್ಲಿ ಸ್ಥಿರತೆ ಇದೆ.