ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 800 ಕೆ.ಜಿ ತೂಕದ ಅಪರೂಪ ಮೀನು !! | ಹರಾಜಿನಲ್ಲಿ ಈ ದೈತ್ಯ ಮೀನು ಮಾರಾಟವಾದದ್ದು ಎಷ್ಟು ಮೊತ್ತಕ್ಕೆ ಗೊತ್ತಾ ??
ಒಮ್ಮೊಮ್ಮೆ ಆಳಸಮುದ್ರಕ್ಕಿಳಿದ ಮೀನುಗಾರರು ತೃಪ್ತಿ ಪಡುವಷ್ಟು ಮೀನುಗಳು ಸಿಗದೇ ಹಿಂತಿರುಗಿ ಬರುವುದುಂಟು. ಆದರೆ ಕೆಲವೊಮ್ಮೆ ಮಾತ್ರ ಕಂಡುಕೇಳರಿಯದ ರೀತಿಯ ಮೀನುಗಳನ್ನು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಅಂತೆಯೇ ಇಲ್ಲಿ ಬರೋಬ್ಬರಿ 800 ಕೆ.ಜಿ ಗಾತ್ರದ ಅಪರೂಪದ ದೈತ್ಯ ಮೀನು ಕಳೆದ ಶುಕ್ರವಾರ ಪಶ್ಚಿಮ ಬಂಗಾಳದ ದಿಘಾ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.
ಸಮುದ್ರ ದಡದಿಂದ ಸುಮಾರು 175 ಕಿ.ಮೀ ದೂರದಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕಾ ದೋಣಿ (ಟ್ರಾಲರ್) ಈ ಮೀನನ್ನು ಸರೆಹಿಡಿದಿದೆ. ವರದಿಗಳ ಪ್ರಕಾರ, 11 ಅಡಿ ಉದ್ದ, 9 ಅಡಿ ಅಗಲ ಇರುವ ಈ ಮೀನು 800 ಕೆ.ಜಿ ತೂಕವಿದೆ. ಅಪರೂಪದ ಮೀನು ಬಲೆಗೆ ಬಿದ್ದಿರುವ ಸುದ್ದಿ ಕೇಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.
ಈ ದೈತ್ಯ ಮೀನನ್ನು ಮೇದಿನಿಪುರದ ದಿಘಾದ ಪ್ರದೇಶದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅದಲ್ಲದೆ ಬರೋಬ್ಬರಿ 50 ಲಕ್ಷಕ್ಕೆ ಮಾರಾಟವಾಗಿದೆಯಂತೆ.