ಆಹಾರ ಸೇವಿಸದ ನಾಯಿಯನ್ನು ಸ್ಕ್ಯಾನಿಂಗ್ ಮಾಡಿದ ವೈದ್ಯರು | ವರದಿ ನೋಡಿದ ಬಳಿಕ ಡಾಕ್ಟರ್ ಗೆ ಕಾದಿತ್ತು ಶಾಕ್!
ಕಾಸರಗೋಡು : ಕೊರೋನ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುತ್ತಿದ್ದು, ಇದೀಗ ಮೂಕ ಪ್ರಾಣಿಗಳಿಗೆ ತೊದರೆಯಾಗುತ್ತಿದೆ. ಕಾರಣ ಎಲ್ಲೆಂದರಲ್ಲಿ ಮಾಸ್ಕ್ ನ ಎಸೆತ. ಹೌದು. ಇಲ್ಲೊಂದು ಕಡೆ ಸಾಕು ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಸೇರಿಕೊಂಡಿರುವ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮಾಸ್ಕ್ ತೆಗೆಯಲಾಗಿದೆ.
ನೀಲೇಶ್ವರದ ರಾಜನ್ ಎಂಬುವರು ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ.ಆದ್ದರಿಂದ ನಾಯಿಯ ಮಾಲೀಕರು ಪಶುವೈದ್ಯರ ಸಲಹೆಯಂತೆ ಕಣ್ಣೂರು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದರು.
ಬಳಿಕ ವರದಿ ಪರಿಶೀಲಿಸಿದ ವೈದ್ಯರಿಗೆ ಸತ್ಯಾಂ ಶ ತಿಳಿದುಬಂದಿದ್ದು,ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಒಂದು ಸೇರಿಕೊಂಡಿತ್ತು.ನಂತರ ಶಸ್ತ್ರಚಿಕಿತ್ಸೆ ಮೂಲಕ ಮಾಸ್ಕ್ ಅನ್ನು ಹೊರತೆಗೆಯಲಾಯಿತು.