BharatPe ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ!!!

ಇತ್ತೀಚೆಗಷ್ಟೇ ಹಣ ದುರುಪಯೋಗದ ಆರೋಪದ ಮೇಲೆ ಕಂಟ್ರೋಲ್ಸ್ ನ ಮುಖ್ಯ ಹುದ್ದೆಯಿಂದ ಅಶ್ನೀರ್ ನ ಹೆಂಡತಿ ಮಾಧುರಿ ಜೈನ್ ಗ್ರೋವರ್ ರನ್ನು ವಜಾ ಮಾಡಲಾಗಿತ್ತು. ಜನವರಿಯಿಂದ ನಡೆಸಿದ ಅಲ್ವಾರೆಜ್ ಅವರ ಪ್ರಾಥಮಿಕ ವರದಿ ಪ್ರಕಾರ ವ್ಯವಹಾರದಲ್ಲಿ ಲೋಪ ದೋಷಗಳು ಕಂಡು ಬಂದಿತ್ತು. ಅಸ್ತಿತ್ವದಲ್ಲಿ ಇಲ್ಲದೇ ಇರುವ ಮಾರಾಟಗಾರರು ಮತ್ತು ಸಲಹೆಗಾರರಿಗೆ ಪಾವತಿ ಮಾಡಿರುವ ಬಗ್ಗೆ ವರದಿಯಾಗಿದೆ.

ಆರೋಪಗಳು ಹಾಗೂ ಪ್ರತ್ಯಾರೋಪಗಳು ಈಗ ಭಾರತ್ ಪೇಯಲ್ಲಿ ಮಾಮೂಲು ಎಂಬಂತಾಗಿದೆ.

ಭಾರತ್ ಪೇ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಡೈರೆಕ್ಟರ್ ಸ್ಥಾನಕ್ಕೆ ಈಗ ಅಶ್ನೀರ್ ಗ್ರೋವರ್ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.

ಕಂಪನಿಯ ಹಿರಿಯ ಮ್ಯಾನೇಜ್ಮೆಂಟ್ ಕುಟುಂಬದ ಸದಸ್ಯರು ಮತ್ತು ಹಿರಿಯ ಮ್ಯಾನೇಜ್ಮೆಂಟ್ ಸದಸ್ಯರಿಗೆ ಸುಳ್ಳು ಮತ್ತು ಆರೋಪದ ಮಾಹಿತಿ ನೀಡುತ್ತಿದ್ದೀರಿ. ಈ ನಡವಳಿಕೆ ಅಸಹ್ಯಕರ ಮತ್ತು ಅನಪೇಕ್ಷಿತ ಮತ್ತು ಇದಕ್ಕೆ ಕಂಪನಿಯು ಆಕ್ಷೇಪಣೆ ಮಾಡುತ್ತಿದೆ. ಇದನ್ನೆಲ್ಲಾ ನಿಲ್ಲಿಸಲು ನಿಮಗೆ ಈ ಮೊದಲೇ ತಿಳಿಸಲಾಗಿದೆ. ನಿಮ್ಮ ಈ ನಡವಳಿಕೆ ಕಂಪನಿ ನಿರ್ದೇಶಕರ ಹುದ್ದೆಗೆ ತಕ್ಕ ನಡವಳಿಕೆ ಅಲ್ಲ” ಎಂದು ಫೆ.22 ರಂದು ಗ್ರೋವರ್ ಗೆ ಇಮೇಲ್ ಮೂಲಕ ತಿಳಿಸಿತ್ತು.

ನಂತರ ಗ್ರೋವರ್ ಅವರು ತಮ್ಮ‌ರಾಜೀನಾಮೆ ಪತ್ರದಲ್ಲಿ ಈ ರೀತಿ ಬರೆದಿದ್ದಾರೆ. ” ಭಾರತೀಯ ಉದ್ಯಮಶೀಲತೆ ಮುಖವಾಗಿ ಮತ್ತು ಯುವಕರಿಗೆ ಸ್ವಂತ ವ್ಯವಹಾರಗಳನ್ನು ಆರಂಭಿಸಲು‌ ನನ್ನನ್ನು ಒಂದು ಸ್ಫೂರ್ತಿಯಾಗಿ ನೋಡಿಕೊಳ್ಳಲಾಗುತ್ತದೆ. ನಾನು ಸ್ವಂತ ಹೂಡಿಕೆದಾರರು ಮತ್ತು ನಿರ್ವಹಣೆ ವಿರುದ್ಧ ಸುದೀರ್ಘ, ಏಕಾಂಗಿ ಹೋರಾಟ ಮಾಡಿದ್ದೇನೆ. ಆದರೆ ಈ ಹೋರಾಟದಲ್ಲಿ ಮ್ಯಾನೇಜ್ಮೆಂಟ್ ನಿಜವಾಗಿ ಅಪಾಯದಲ್ಲಿರುವುದನ್ನು ಕಳೆದುಕೊಂಡಿದೆ ಅದು ಭಾರತ್ ಪೇ ” ಎಂದು ಬರೆದಿದ್ದಾರೆ.

ನನ್ನ ಅನುಪಸ್ಥಿತಿಯಲ್ಲಿ ಕಂಪನಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಹುದು ಎಂದು ನೀವು ನಂಬಿರುವುದರಿಂದ ಈ ಸವಾಲನ್ನು ಮುಂದಿಟ್ಟು ಹೊರಡುತ್ತಿದ್ದೇನೆ. ನಾನು ಈವರೆಗೂ ಸಂಪಾದಿಸಿದ ಅರ್ಧದಷ್ಟಾದರೂ ಉನ್ನತಿ ಮಾಡಿ…ನಾನು ಇಲ್ಲಿಯವರೆಗೂ ಬಳಸಲಾಗಿರುವ ಮೊತ್ತದ ಮೂರು ಪಟ್ಟು ಮೊತ್ತವನ್ನು ಬಿಟ್ಟು ತೆರಳುತ್ತಿದ್ದೇನೆ’ ಎಂದಿದ್ದಾರೆ.

ಕಂಪನಿಯ ಅತಿ ದೊಡ್ಡ ಷೇರುದಾರ‌ನಾಗಿ ಅಶನೀರ್ ಮುಂದುವರಿಯಲಿದ್ದಾರೆ. ತಾವೇ ಸ್ಥಾಪಿಸಿದ‌ ಕಂಪನಿಯ ಹೊಣೆಗಾರಿಕೆಯಿಂದ ಹೊರಬರುವಂತೆ ತಮ್ಮ ಮೇಲೆ ಒತ್ತಾಯ ಮಾಡಲಾಗಿದೆ ಎಂದು ಆರೋಪ ಮಾಡಿರುವ ಅಶನೀರ್, ನಿರ್ದೇಶಕರ ಮಂಡಳಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ.

Leave A Reply

Your email address will not be published.