ಬೆಳಾಲ್ ನಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಸಮಾರಂಭ : ಧರ್ಮದರ್ಶಿ ಹರೀಶ್ ಆರಿಕೋಡಿ ಅವರಿಗೆ ‘ ಬೆಳಾಲಿನ ಮುತ್ತು’ ಎಂಬ ಬಿರುದು

ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಮುಹೂರ್ತದಲ್ಲಿ ದ.ಕ.ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಮೋಹನ ಗೌಡ ಸ್ಮರಣಾರ್ಥವಾಗಿ ಬೆಳಾಲು ಗ್ರಾಮ ಮಟ್ಟದ 8 ತಂಡಗಳ ಪ್ರೊ. ಮಾದರಿಯ ಬಿಡ್ಡಿಂಗ್ ಕಬಡ್ಡಿ ಮತ್ತು 65 ಕೆಜಿ ವಿಭಾಗ್ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಬೆಳಾಲ್ ಫ್ರೆಂಡ್ಸ್ ಟ್ರೋಫಿ 2022 ಇದೇ ಫೆ.26 ರಂದು ಶನಿವಾರ ಶ್ರೀ‌ ಧ.ಮಂ.ಹೈಸ್ಕೂಲ್ ಮೈದಾನದಲ್ಲಿ ನಡೆದಿತ್ತು. 65 ಕೆಜಿ ವಿಭಾಗದಲ್ಲಿ ಆಹ್ವಾನಿತ 32 ತಂಡಗಳಿಗೆ ಅವಕಾಶ ನೀಡಲಾಗಿತ್ತು.

 

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರ ಸಮಾಜ ಸೇವೆಯನ್ನು ಗುರುತಿಸಿ ‘ಬೆಳಾಲಿನ ಮುತ್ತು’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

ಕ್ಷೇತ್ರ ಮಹಿಮೆ : ಆರಿಕೊಡಿ ಕ್ಷೇತ್ರಕ್ಕೆ ಬಂದು ಅನೇಕ ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಬಂದಾಗ ಕ್ಷೇತ್ರದಿಂದ ಅವರಿಗೆ ಬೇಕಾದ ಸೇವೆಯನ್ನು ಮಾಡುವ ಮೂಲಕ ಜನರ ಪ್ರೀತಿಗೆ ಈ ಕ್ಷೇತ್ರ ಪಾತ್ರವಾಗಿದೆ.
ಅದೇ ರೀತಿ ಎಲ್ಲಾ ಕಡೆಯ ಜನರನ್ನು ಸೇರಿಸಿ ವಾಟ್ಸಪ್ ಗ್ರೂಪ್ ಗಳನ್ನು ಮಾಡಿ ಬಡಜನರು ತಮಗೆ ಕಷ್ಟ ಬಂದಾಗ ಕ್ಷೇತ್ರಕ್ಕೆ ತಿಳಿಸಿ ಎಂಬ ಒಂದು ದಿಟ್ಟ ಹೆಜ್ಜೆಯನ್ನು ಈ ಕ್ಷೇತ್ರ ಮೂಲಕ ನಡೆದಿದೆ. ಈ ಮೂಲಕ ಸಾಮಾಜಿಕ ಜಾಲತಾಣವನ್ನು ಕ್ಷೇತ್ರ ಸದುಪಯೋಗ ಮಾಡಿಕೊಂಡಿದೆ.
ಇಷ್ಟು ಮಾತ್ರವಲ್ಲದೇ ವಾರದ ಮೂರು ದಿನ ಕ್ಷೇತ್ರದಲ್ಲಿ ಪೂಜೆ ಮತ್ತು ಅಭಯದ ನುಡಿ ಮಾಡುತ್ತಾ ಬಂದಿದ್ದು, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಈ ಕ್ಷೇತ್ರದ ಪುಣ್ಯ ಕಾರ್ಯ.
ಭಕ್ತಾದಿಗಳು ಕಷ್ಟವನ್ನು ಹೇಳಿಕೊಂಡಾಗ ಚಾಮುಂಡೇಶ್ವರಿ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ.

Leave A Reply

Your email address will not be published.