ಜಗತ್ತಿನಲ್ಲೇ ಅತ್ಯಂತ ದುಬಾರಿ ಮಾವಿಹಣ್ಣು| ಈ ಹಣ್ಣಿನ ಬೆಲೆ ಕೆ.ಜಿ ಗೆ 2.7 ಲಕ್ಷ

ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ಅದರ ಹೆಸರು ಹೇಳಿದರೇನೇ ಸಾಕು ಬಾಯಲ್ಲಿ ನೀರೂರುತ್ತೆ! ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ಮಾವಿನಹಣ್ಣು ಅಪರೂಪದ ಮಾವಿನಹಣ್ಣು. ಜೊತೆಗೆ ಅತಿ ದುಬಾರಿ ಕೂಡಾ. ಇಷ್ಟು ಮಾತ್ರವಲ್ಲ ಅತಿ ದುಬಾರಿ ಕೂಡಾ.

 

ಅಪರೂಪದಲ್ಲಿ ಅಪರೂಪದ ಈ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿಯಂತೆ. ಆಶ್ಚರ್ಯವಾಗುತ್ತಿದ್ದರೂ ನಂಬಲೇಬೇಕಾದ ಸತ್ಯ. ಈ ಹಣ್ಣನ್ನು ಬೆಳೆದವರು ಆಭರಣ ರಕ್ಷಿಸಿದಷ್ಟೇ ಜಾಗರೂಕತೆಯಿಂದ ರಕ್ಷಿಸುತ್ತಿದ್ದಾರೆ. ವಿಶ್ವದಲ್ಲಿಯೇ ಅತಿ ದುಬಾರಿ ಹಣ್ಣನ್ನು ಬೆಳೆದ ದಂಪತಿ ಯಾರು ? ಬನ್ನಿ ತಿಳಿಯೋಣ.

ಈ ಹಣ್ಣು ಜಪಾನ್ ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಇದರ ಹೆಸರು ಮಿಯಾಜಾಕಿ ಮಾವಿನ ಹಣ್ಣು‌.‌ ಹಾಗೆಯೇ ಈ ಅಪರೂಪದ ಹಣ್ಣನ್ನು ಜಪಾನಿನಲ್ಲಿ ಮೊದಲು ಬೆಳೆದವರು ಮಿಯಾಜಾಕಿ ನಗರದವರು. ಸಾಮಾನ್ಯವಾಗಿ ಎಲ್ಲಾ ಮಾವಿನಹಣ್ಣು ಹಳದಿ ಬಣ್ಣದಲ್ಲಿದ್ದರೇ ಈ ಅಪರೂಪದ ಮಾವಿನ ಹಣ್ಣು ಕಡುಗೆ‌ಂಪು ಬಣ್ಣದಲ್ಲಿದೆ.

ಅಪರೂಪದಲ್ಲಿ ಅಪರೂಪದ ಈ ಮಾವಿನಹಣ್ಣನ್ನು ಅಂದರೆ ಈ ಜಪಾನೀಸ್ ಮಾವಿನ ತಳಿಯನ್ನು ಮಧ್ಯಪ್ರದೇಶದ ದಂಪತಿ ಬೆಳೆದಿದ್ದಾರೆ. ಬೆಳೆದ ಹಣ್ಣಿನ ಕಾವಲಿಗೆ 6 ನಾಯಿಗಳನ್ನು ಹಾಗೂ 4 ಜನ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದ್ದಾರೆ.

ಈ ಮಧ್ಯಪ್ರದೇಶದ ದಂಪತಿ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಅವರಿಗೆ ಒಂದಿಷ್ಟು ಮಾವಿನ ಸಸಿಗಳನ್ನು ನೀಡಿದ್ದಾರೆ. ಇದನ್ನು ಮನೆಗೆ ತಂದ ದಂಪತಿ ತಮ್ಮ ತೋಟದಲ್ಲಿ ಚೆನ್ನಾಗಿ ಬೆಳೆಸಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಮಾವಿನ ಹಣ್ಣು ಹಳದಿ ಬಣ್ಣದಲ್ಲಿದ್ದರೆ ಈ ಹಣ್ಣು ಕಡುಗೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಈ ಬಣ್ಣದ ಬಗ್ಗೆ ಆಶ್ಚರ್ಯಗೊಂಡ ಗಂಡ ಹೆಂಡತಿ ಇದರ ಬಗ್ಗೆ ಸಂಶೋಧನೆ ಮಾಡುತ್ತಾರೆ. ಈ ಹಣ್ಣಿನ ಮಹತ್ವದ ಬಗ್ಗೆ ತಿಳಿಯುತ್ತಿದ್ದಂತೆ ಅವರಿಗೆ ಭಾರೀ ಸಂತೋಷ ಆಗಿದೆ.

ಜಪಾನೀಸ್ ಮಿಯಾಜಕಿ ಮಾವಿನ ಹಣ್ಣು ವಿಶ್ವದಲ್ಲೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದು. ಈ ಹಣ್ಣಿನ ಬೆಲೆ ಪ್ರತಿ ಕೆಜಿ ಗೆ 2.7 ಲಕ್ಷ ರೂಪಾಯಿ ಇತ್ತು. ಅಂತರಾಷ್ಟ್ರೀಯ ಮಾರುಕಟ್ಟೆ ಹೆಚ್ಚು ಬೇಡಿಕೆ ಇದೆ.

ಈ ಹಣ್ಣನ್ನು ಕಳೆದ ವರ್ಷ ಕಳ್ಳರು ಬಂದು ಕದ್ದುಕೊಂಡು ಹೋಗಿದ್ದಾರೆ. ಹಾಗಾಗಿ ಈ ವರ್ಷ ಈ ಮಾವಿನಹಣ್ಣನ್ನು ಕಳ್ಳರಿಂದ ಕಾಪಾಡಿಕೊಳ್ಳಲು 6 ನಾಯಿಗಳನ್ನು, 4 ಕಾವಲುಗಾರರನ್ನು ನಿಯೋಜಿಸಲಾಗಿದೆ. ಮತ್ತು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಫಸಲು ಬರುವಂತೆ ತೋಟವನ್ನು ರಕ್ಷಿಸಿದ್ದಾರೆ.

ಪೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದ ಸಮೃದ್ಧಿಯಾಗಿರುವ ಈ ವಿಶೇಷ ಹಣ್ಣು ಇದಾಗಿದೆ. ಇದರಲ್ಲಿ ದೃಷ್ಟಿಹೀನತೆಯನ್ನು ಸುಧಾರಿಸುವ ಶಕ್ತಿ ಇದೆ‌.

Leave A Reply

Your email address will not be published.