ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ|ನಾಳೆಯೇ ನಡೆಯಲಿದೆ ಸಂದರ್ಶನ
ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವವರಿಗೆ ಸಿಹಿ ಸುದ್ದಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು : ಡಯಾಲಿಸಿಸ್ ಟೆಕ್ನಿಷಿಯನ್,ಹಾಸ್ಪಿಟಲ್ ಅಟೆಂಡೆಂಟ್
ಒಟ್ಟು ಹುದ್ದೆಗಳು : 22
ಉದ್ಯೋಗದ ಸ್ಥಳ : ಬೆಂಗಳೂರು
ವೇತನ ಮಾಸಿಕ : ₹ 12,500-1,20,000
ಸಂದರ್ಶನ ನಡೆಯುವ ದಿನಾಂಕ : 28/02/2022
ಹುದ್ದೆಯ ಮಾಹಿತಿ:
ನೆಫ್ರೋಲಾಜಿಸ್ಟ್-1
ಆನ್ ಡ್ಯೂಟಿ ಮೆಡಿಕಲ್ ಆಫೀಸರ್-2
ಮ್ಯಾನೇಜರ್-1
ಡಯಾಲಿಸಿಸ್ ಟೆಕ್ನಿಷಿಯನ್-10
ಡಯೆಟಿಶಿಯನ್-2
ಹಾಸ್ಪಿಟಲ್ ಅಟೆಂಡೆಂಟ್-6
ವಿದ್ಯಾರ್ಹತೆ:
ನೆಫ್ರೋಲಾಜಿಸ್ಟ್-ಎಂಬಿಬಿಎಸ್, ಎಂಡಿ
ಆನ್ ಡ್ಯೂಟಿ ಮೆಡಿಕಲ್ ಆಫೀಸರ್-ಎಂಬಿಬಿಎಸ್
ಮ್ಯಾನೇಜರ್-ಬಿಬಿಎಂ, ಎಂಬಿಎ
ಡಯಾಲಿಸಿಸ್ ಟೆಕ್ನಿಷಿಯನ್-ಪಿಯುಸಿ
ಡಯೆಟಿಶಿಯನ್-ಎಂಎಸ್ಸಿ
ಹಾಸ್ಪಿಟಲ್ ಅಟೆಂಡೆಂಟ್-10ನೇ ತರಗತಿ
ಅನುಭವ:
ನೆಫ್ರೋಲಾಜಿಸ್ಟ್-ಡಯಾಲಿಸಿಸ್ ಸೆಂಟರ್ನಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ
ಆನ್ ಡ್ಯೂಟಿ ಮೆಡಿಕಲ್ ಆಫೀಸರ್-ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಮತ್ತು ಮೆಡಿಕಲ್ ಕೌನ್ಸಿಲ್ನಲ್ಲಿ ನೋಂದಣಿಯಾಗಿರಬೇಕು
ಮ್ಯಾನೇಜರ್-ಸಂಬಂಧಿತ ಕ್ಷೇತ್ರದಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ
ಡಯಾಲಿಸಿಸ್ ಟೆಕ್ನಿಷಿಯನ್-ಸಂಬಂಧಿತ ಕ್ಷೇತ್ರದಲ್ಲಿ 3-4 ವರ್ಷ ಕೆಲಸ ಮಾಡಿದ ಅನುಭವ
ಡಯೆಟಿಶಿಯನ್-ಸಂಬಂಧಿತ ಕ್ಷೇತ್ರದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ
ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಫೆಬ್ರವರಿ 28, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ಇರಬೇಕು.
ವೇತನ:
ನೆಫ್ರೋಲಾಜಿಸ್ಟ್-ಮಾಸಿಕ ₹ 1,20,000
ಆನ್ ಡ್ಯೂಟಿ ಮೆಡಿಕಲ್ ಆಫೀಸರ್-ಮಾಸಿಕ ₹ 45,000
ಮ್ಯಾನೇಜರ್-ಮಾಸಿಕ ₹ 30,000
ಡಯಾಲಿಸಿಸ್ ಟೆಕ್ನಿಷಿಯನ್-ಮಾಸಿಕ ₹ 20,000-30,000
ಡಯೆಟಿಶಿಯನ್-ಮಾಸಿಕ ₹ 30,000
ಹಾಸ್ಪಿಟಲ್ ಅಟೆಂಡೆಂಟ್-ಮಾಸಿಕ ₹ 12,500
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವೈದ್ಯಾಧಿಕಾರಿಗಳ ಕಚೇರಿ
ರಾಜರಾಜೇಶ್ವರಿ ನಗರ ವಲಯ
ಐಡಿಯಲ್ ಹೋಮ್ಸ್ ಬಡಾವಣೆ
ರಾಜರಾಜೇಶ್ವರಿ ನಗರ
ಬೆಂಗಳೂರು-560098
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ bbmp.gov.in ಗೆ ಭೇಟಿ ನೀಡಬಹುದು. ಇದೇ ಫೆಬ್ರವರಿ 28ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.