ಎನ್ ಆರ್ ಐ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ | ಹೆಂಡತಿ ಮಾಡಿದಳು ಖತರ್ನಾಕ್ ಐಡಿಯಾ

ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಹೋದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದಲ್ಲಿ ನಡೆದಿದೆ.

 

34 ವರ್ಷದ ಪಂಚಾಯತಿ ಸದಸ್ಯೆ ಸೌಮ್ಯ ಅಬ್ರಾಹಂ,‌ಆಕೆಯ ಪ್ರಿಯಕರನ ಜೊತೆ ಸೇರಿ 5 ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ ಸುನೀಲ್ ಬೈಕ್ ನಲ್ಲಿ ಇಟ್ಟಿದ್ದಳು. ಫೆ.22 ರಂದು ಬಂದ ಮಾಹಿತಿ ಪ್ರಕಾರ ಸುನೀಲ್ ಬೈಕನ್ನು ಪೊಲೀಸರು ಸೀಜ಼್ ಮಾಡಿ ನಿಷಿದ್ಧ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಜಾ ತನ್ನ ಬೈಕಿನಲ್ಲಿದ್ದ ಬಗ್ಗೆ ಸ್ವತಃ ಸುನೀಲ್ ಕಂಡು ಶಾಕ್ ಆಗಿದ್ದ. ನನಗೇನೂ ಗೊತ್ತಿಲ್ಲ ಎಂದು ಹೇಳುತ್ತನೇ ಇದ್ದ.

ಇದಾದ ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಗೊಳಿಸಿದಾಗ, ಮಾಹಿತಿದಾರನೋರ್ವ ಸುನೀಲ್ ಬೈಕ್ ನಲ್ಲಿ ಯಾರೋ ಡ್ರಗ್ಸ್ ಇಟ್ಟಿರುವ ವಿಷಯ ಪೊಲೀಸರಿಗೆ ತಿಳಿಯುತ್ತದೆ. ನಂತರ ಫೋನ್ ಸಂಭಾಷಣೆ ಆಧಾರದ ಮೇಲೆ ಡ್ರಗ್ಸ್ ಇಟ್ಟ ವ್ಯಕ್ತಿಯನ್ನು ಬೋಧಿಸಲಾಗುತ್ತದೆ.

ಫೋನ್ ರೆಕಾರ್ಡ್ ನಲ್ಲಿ 43 ವರ್ಷದ ಎನ್ ಆರ್ ಐ ವಿನೋದ್ ರಾಜೇಂದ್ರನ್ ಮತ್ತು ಡ್ರಗ್ಸ್ ಇಟ್ಟ ವ್ಯಕ್ತಿ ನಿರಂತರ ಸಂಪರ್ಕದಲ್ಲಿರುವುದು ತಿಳಿಯುತ್ತದೆ.

ಅಲ್ಲದೇ ಸುನಿಲ್ ಪತ್ನಿ ಸೌಮ್ಯ ಕೂಡಾ ಎನ್ ಆರ್ ಐ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಹಾಗೂ ಈ ಕೃತ್ಯದಲ್ಲಿ ತನ್ನ ಕೈವಾಡ ಕೂಡ ಇದೆ ಎಂದು ಸೌಮ್ಯ ಹೇಳಿದ್ದಾಳೆ.

ಡ್ರಗ್ಸ್ ಸರಬರಾಜು ಮಾಡಿದ ವ್ಯಕ್ತಿ ಸೇರಿದಂತೆ ಕೃತ್ಯ ಎಸಗಿದ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ

Leave A Reply

Your email address will not be published.