ಹೃದಯ ಕರಗುವಂತಿದೆ ಈ ಬೀದಿನಾಯಿಯ ಮಿಸ್ಸಿಂಗ್ ಕೇಸ್ !! | ನಾಪತ್ತೆಯಾಗಿದ್ದ ಶ್ವಾನಕ್ಕೆ ಮತ್ತೆ ರೋಮಾಂಚನಕಾರಿಯಾಗಿ ಸ್ವಾಗತಿಸಿದ ಮನೆಮಂದಿ | ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಸ್ಟೋರಿ

ಅದೆಷ್ಟೋ ಮಾತಿಗೆ ಹೇಳುವುದುಂಟು ಒಂದೊತ್ತು ಊಟವನ್ನು ನಾಯಿಗೆ ಹಾಕಿ ಸಾಕಿದರೆ ಅದಕ್ಕಿರುವ ನಿಯತ್ತು ಮನುಷ್ಯರಿಗೆ ಇಲ್ಲವೆಂದು. ಇದು ನಿಜವಾಗಿಯೂ ಸತ್ಯದ ಮಾತು. ತನಿಗೆ ಅನ್ನ ಹಾಕುವ ಧಣಿಗಳಿಗೆ ಎಷ್ಟು ಮರ್ಯಾದಿ ನೀಡುತ್ತದೆ ಎಂದು ನೋಡಿದರೆ ಅದಕ್ಕಿರುವ ಪ್ರೀತಿ, ಕಾಳಜಿ ರಕ್ತ ಸಂಬಂಧಿಗಳಿಗೂ ಇರುವುದಿಲ್ಲ.ಅದು ಸಾಕು ನಾಯಿಯೇ ಆಗಬೇಕೆಂದಿಲ್ಲ. ಒಂದೊತ್ತು ಊಟ ಹಾಕಿದರೆ ಬೀದಿ ನಾಯಿಯೂ ಪ್ರೀತಿ ತೋರಿಸುತ್ತದೆ.ಅದೇ ರೀತಿ ಪ್ರೀತಿಯಿಂದ ಸಾಕಿದ್ದ ಬೀದಿ ನಾಯಿ ನಾಪತ್ತೆಯಾಗಿದ್ದು, ಒಂದು ವಾರದ ಬಳಿಕ ಪತ್ತೆಯಾದ ನಾಯಿಗೆ ಆರತಿ ಎತ್ತಿ ಸ್ವಾಗತಿಸಿದ ದೃಶ್ಯ ರೋಮಾಂಚನವಾಗಿದೆ.

 

ಮುಂಬೈನ ಪ್ರಭಾದೇವಿಯ ಸೊಸೈಟಿಯ ಬೀದಿಯಲ್ಲಿ ವಾಸವಾಗಿದ್ದ ವಿಸ್ಕಿ ಎಂಬ ಹೆಸರಿನ ಬೀದಿ ನಾಯಿ ನಾಪತ್ತೆಯಾಗಿತ್ತು. ಆ ನಾಯಿಗಾಗಿ 1 ವಾರ ಹುಡುಕಾಡಿದ ಜನರು ಕೊನೆಗೂ ಅದನ್ನು ಪತ್ತೆಹಚ್ಚಿ ಕರೆತಂದಿದ್ದಾರೆ. ಅಲ್ಲದೆ, ಆರತಿ ಎತ್ತಿ ಸ್ವಾಗತಿಸಿದ್ದಾರೆ!. ಇದೀಗ ಬೀದಿನಾಯಿಯೊಂದರ ಕಥೆ ಸಾವಿರಾರು ನೆಟ್ಟಿಗರ ಹೃದಯವನ್ನು ಕರಗಿಸಿದೆ. ಕಳೆದೊಂದು ವಾರದ ಹಿಂದೆ ನಾಪತ್ತೆಯಾಗಿದ್ದ ಬೀದಿ ನಾಯಿಯೊಂದು ಕೊನೆಗೂ ಆ ಬೀದಿಗೆ ವಾಪಾಸ್ ಬಂದಿದೆ. ಇದರಿಂದ ಖುಷಿಯಾದ ಆ ಬೀದಿಯ ಜನರು ಸಂಭ್ರಮಾಚರಣೆ ಮಾಡಿದ್ದಾರೆ.

ವಿಸ್ಕಿ ಎಂಬ ನಾಯಿಯನ್ನು ಆ ಸೊಸೈಟಿಯ ಎಲ್ಲರೂ ಪ್ರೀತಿಸುತ್ತಿದ್ದುದರಿಂದ ಆ ಬೀದಿ ನಾಯಿ ನಾಪತ್ತೆಯಾಗುತ್ತಿದ್ದಂತೆ ಆ ಸೊಸೈಟಿಯ ಜನರು ಬಹಳ ಬೇಸರಗೊಂಡಿದ್ದರು. ಅವರಲ್ಲಿ ಕೆಲವು ನಿವಾಸಿಗಳು 7 ದಿನಗಳ ಹುಡುಕಾಟದ ನಂತರ ವಿಲ್ಸನ್ ಕಾಲೇಜಿನ ಬಳಿಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ವಿಸ್ಕಿ ಎಂಬ ಆ ಬೀದಿ ನಾಯಿಯನ್ನು ಪತ್ತೆ ಹಚ್ಚಿದರು. ಆ ನಾಯಿಯನ್ನು ಮತ್ತೆ ಸೊಸೈಟಿಗೆ ವಾಪಾಸ್ ಕರೆತರಲಾಯಿತು.

ವಿಸ್ಕಿ ಬೀದಿ ನಾಯಿಯಾದರೂ ಆ ಸೊಸೈಟಿಯ ಜನರು ಆ ನಾಯಿಯನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಆ ನಾಯಿ ವಾಪಾಸ್ ಬರುತ್ತಿದ್ದಂತೆ ಅಲ್ಲಿನವರು ಹರ್ಷೋದ್ಗಾರಗಳೊಂದಿಗೆ ಬೀದಿ ನಾಯಿಯನ್ನು ಸ್ವಾಗತಿಸಿದರು.ಆ ವಿಸ್ಕಿಯ ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಮ್ಮ ಸೊಸೈಟಿಯ ನಾಯಿ ವಿಸ್ಕಿ ಫೆಬ್ರವರಿ 8ರಂದು ಪ್ರಭಾದೇವಿ ಏರಿಯಾದಿಂದ ಕಳೆದುಹೋಗಿತ್ತು. ಆ ನಾಯಿ ಫೆಬ್ರವರಿ 15ರಂದು ವಿಲ್ಸನ್ ಕಾಲೇಜು ಬಳಿಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪತ್ತೆಯಾಗಿದೆ. 7 ದಿನಗಳ ಹುಡುಕಾಟದ ನಂತರ ಆ ನಾಯಿ ಮತ್ತೆ ಸಿಕ್ಕಿದೆ. ಅದನ್ನು ಕಂಡು ಇಡೀ ಸೊಸೈಟಿಯ ಜನರು ಖುಷಿಯಾಗಿ, ವಿಸ್ಕಿಯನ್ನು ಸ್ವಾಗತಿಸಿದ್ದೇವೆ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 16,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಕಣ್ಣೀರು ಹಾಕಿದರು. ‘ಇದು ತುಂಬಾ ಸಂತೋಷದಿಂದ ಕೂಡಿದ ಶುದ್ಧ ಪ್ರೀತಿ’ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಈ ವಿಡಿಯೋ ನೋಡಿ ನನಗೆ ಅಳುವೇ ಬಂದಿತು ಎಂದು ಕಮೆಂಟ್ ಮಾಡಿದ್ದಾರೆ.

https://www.instagram.com/reel/CaKh_dEI76b/?utm_medium=copy_link

Leave A Reply

Your email address will not be published.