ಕುಟ್ರುಪಾಡಿ: ಹಳ್ಳಿ-ಉರುಂಬಿ ಕಾಲು ದಾರಿಗೆ ಗ್ರಾ.ಪಂ. ವತಿಯಿಂದ ಪಾಲ ಅಳವಡಿಕೆ
ಸ್ಥಳೀಯ ಜಾಗದ ಮಾಲಕರಿಂದ ಆಕ್ಷೇಪ- ಮಾತಿನ ಚಕಮಕಿ
ಕಡಬ: ಕುಟ್ರುಪಾಡಿ ಗ್ರಾಮದ ಹಳ್ಳಿಯಿಂದ ಉರುಂಬಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಗೆ ಪಾಲ ಅಳವಡಿಕೆ ಕಾರ್ಯ ಫೆ.26 ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜಾಗದ ಮಾಲಕರಿಂದ ಆಕ್ಷೇಪ ವ್ಯಕ್ತವಾಗಿ ಸ್ಥಳದಲ್ಲಿ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಹಳ್ಳಿಯಿಂದ ಉರುಂಬಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿಯಲ್ಲಿ ತೋಡೊಂದಕ್ಕೆ ಪಾಲ ಅಳವಡಿಸಲಾದ ಗ್ರಾ.ಪಂ.ನಿರ್ಧರಿಸಿ ಇಂದು ಸ್ಥಳೀಯರ ಸಹಕಾರದಿಂದ ಪಾಲ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜಾಗದ ಮಾಲಕ ಜಾನ್ಸನ್ ಹಾಗೂ ಜೋಸ್ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಕಡಬ ಮಹಿಳಾ ಪೋಲಿಸ್ ಚಂದ್ರಿಕಾ ಅವರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ.ಅಧ್ಯಕ್ಷ ಮೋಹನ್ ಕೆರೆಕೊಡಿ, ಸದಸ್ಯ ರಾದ ವಿಜಯ ಹಳ್ಳಿ, ಸಂತೋಷ್ ದೊಳ, ಪಂಚಾಯತ್ ಸಿಬ್ಬಂದಿಗಳಾದ ಅಂಗು, ಜಿತೇಶ್ ಸೇರಿದಂತೆ ಹಲವಾರು ಮಂದಿ ಸ್ಥಳೀಯರು ಉಪಸ್ಥಿತರಿದ್ದರು.